Ad Widget

ಬೊಳುಬೈಲು ಸಮೀಪ ಕಾರು ಅಪಘಾತ

ಬೊಳುಬೈಲು ಸಮೀಪ ಮಂಗಳೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಘಟನೆ ಕಳೆದ ರಾತ್ರಿ ನಡೆದಿದೆ. ಗಾಂಧಿನಗರದ ಅಶ್ರಫ್ ಹಾಗೂ ಕುಟುಂಬಸ್ಥರು ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆನ್ನಲಾಗಿದೆ.

ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ.

ಮಾಜಿ ಪ್ರಧಾನಿ, ಭಾರತರತ್ನ ದಿ. ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಆ.20ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಮಾತನಾಡಿ ರಾಜೀವ್ ಗಾಂಧಿಯವರು 80ರ ದಶಕದಲ್ಲಿ ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದರು. ಇಂದು ದೇಶ ವಿಶ್ವದಲ್ಲೇ ಐ ಟಿ ಕ್ಷೇತ್ರದ ದಿಗ್ಗಜ ಎನಿಸಿಕೊಳ್ಳಲು...
Ad Widget

ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ದಿ. ಜಾನಕಿ ವೆಂಕಟ್ರಮಣ ಗೌಡರ 10ನೇ ಪುಣ್ಯತಿಥಿ ಆಚರಣೆ

ಕೆವಿಜಿ : ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ ಧರ್ಮ ಪತ್ನಿ ದಿ. ಶ್ರೀಮತಿ ಜಾನಕಿ ವೆಂಕಟ್ರಮಣ ಗೌಡರ 10ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿನಮನ ಕಾರ್ಯಕ್ರಮವು ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಆ. 22 ರಂದು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ....

ಅಮ್ಮ ಚಿಣ್ಣರ ಮನೆಯಲ್ಲಿ ಮುದ್ದು ರಾಧಾ-ಕೃಷ್ಣ ಸ್ಪರ್ಧೆ

ಸುಳ್ಯದ ಅಮ್ಮ ಚಿಣ್ಣರ ಮನೆ ಮತ್ತು ಯುವಜನ ಸಂಯುಕ್ತ ಮಂಡಳಿಯ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಮುದ್ದು ರಾಧಾ ಸ್ಪರ್ಧೆ ಆ.21 ರಂದು ಯುವಜನ ಸಂಯುಕ್ತ ಮಂಡಳಿಯ ಸದನ ಸಭಾಂಗಣದಲ್ಲಿ ನಡೆಯಿತು. ಅಮ್ಮ ಚಿಣ್ಣರ ಮನೆಯ ಹಿರಿಯ ವಿದ್ಯಾರ್ಥಿಗಳಾದ ಮನ್ವಿತ್ ಅಡ್ಪಂಗಾಯ, ಭೂಮಿಕಾ ವಿ. ಕೆ. ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು....

ಅಚ್ರಪ್ಪಾಡಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಅಚ್ರಪ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆ. 21ರಂದು ಅಚ್ರಪ್ಪಾಡಿ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಹಿತರಕ್ಷಣಾ ಸಮಿತಿಯ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಜನಾರ್ಧನ ಅಚ್ರಪ್ಪಾಡಿ ವಹಿಸಿದ್ದರು. ಕಾರ್ಯಕ್ರಮವನ್ನು ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪಡ್ಪು ದೀಪ ಬೆಳಗಿಸಿ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ...

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದೀಕ್ಷಾ ಪ್ರಥಮ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿನ ಆರನೇ ತರಗತಿ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ಈಕೆ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ಅವರ ಶಿಷ್ಯೆಯಾಗಿ ಇಂಡಿಯಾ ಬುಕ್...

ದೇವ : 32 ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

ದೇವಚಳ್ಳ ಗ್ರಾಮದ ದೇವ ಗೆಳೆಯರ ಬಳಗ,ಜ್ಯೋತಿಲಕ್ಷ್ಮಿ ಮಹಿಳಾಮಂಡಲ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ, ಅಂಗನವಾಡಿ ಬೆಂಬಲ ಸಮಿತಿ ದೇವ ಇವುಗಳ ಜಂಟಿ ಆಶ್ರಯದಲ್ಲಿ ಆ‌.18 ರಂದು 32 ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ ನಡೆಯಿತು. ಊರಿನ ಹಿರಿಯರಾದ ಅಪ್ಪು ಬೆಳ್ಚಪ್ಪಾಡ ರವರು ದೀಪ ಬೆಳಗಿಸುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು....

ದಿ| ಕುರುಂಜಿಜಾನಕಿ ವೆಂಕಟ್ರಮಣ ಗೌಡರ 10ನೇ ಪುಣ್ಯ ಸ್ಮರಣೆ

ಅಕಾಡೆಮಿ ಆಫ್ ಲಿಬರಲ್‌ ಎಜ್ಯುಕೇಶನ್(ರಿ) ಸುಳ್ಯ ಇದರ ಆಡಳಿತ ಕಛೇರಿಯಲ್ಲಿ ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಕ್ರಾಂತಿಯ ಹರಿಕಾರ ಪೂಜ್ಯ ಡಾ. ಕುರುಂಜಿ ವೆಂಕಟ್ರಮಣ ಗೌಡರ ಧರ್ಮಪತ್ನಿ ದಿ| ಕುರುಂಜಿಜಾನಕಿ ವೆಂಕಟ್ರಮಣ ಗೌಡರ 10ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮವು ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ)ನ ಆಡಳಿತ ಕಛೇರಿಯಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್‌ಎಜ್ಯುಕೇಶನ್ (ರಿ) ಸುಳ್ಯ...

ನಾಗರಿಕರ ದಿನದಂದು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವಿಶ್ರಾಂತ ಕಾರ್ಯಕರ್ತರಿಗೆ ಸನ್ಮಾನ

ಸುಳ್ಯಮಂಡಲದ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಸಂಘಟನೆಯಲ್ಲಿ ಈ ಹಿಂದೆ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವ ಹಿರಿಯರಾದ ಶ್ರೀಮತಿ ಎಂಜಿ ಕಾವೇರಮ್ಮ, ಶ್ರೀ ಮಾಧವ ಗೌಡ ಕಲ್ಲಗದ್ದೆ ಮತ್ತು ಶ್ರೀ ನಿತ್ಯಾನಂದ ಭಂಡಾರಿ ಇವರನ್ನು ಹಿರಿಯ ನಾಗರಿಕರ ದಿನದಂದು ಗೌರವದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ,...

ಯುವಸ್ಪೂರ್ತಿ ಸಂಘ ಪುತ್ಯ ಪೆರಾಜೆ (ಕರಂಟಡ್ಕ) ಇದರ ವತಿಯಿಂದ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

ಸ.ಕಿ.ಪ್ರಾ.ಶಾಲೆ ಪುತ್ಯ ಪೆರಾಜೆ ಶಾಲಾ ವಠಾರದಲ್ಲಿ ಯುವಸ್ಪೂರ್ತಿ ಸಂಘ ಪುತ್ಯ ಪೆರಾಜೆ (ಕರಂಟಡ್ಕ) ಇದರ ವತಿಯಿಂದ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ.18 ರಂದು ನಡೆಯಿತು. ಕಾರ್ಯಕ್ರವನ್ನು ಪರಮೇಶ್ವರ ಪೆರಂಗಜೆ ಉದ್ಘಾಟಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಜಾರುಕಂಬ ಸ್ಪರ್ಧೆ ನಡೆಸಲಾಯಿತು. ಸಭಾ...
Loading posts...

All posts loaded

No more posts

error: Content is protected !!