ಸುಳ್ಯದ 33/11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಿರಿಯ ಇಂಜಿನಿಯರ್ ಆಗಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿ ಆ.31 ರಂದು ಸೇವೆಯಿಂದ ನಿವೃತ್ತಗೊಳ್ಳಲಿರುವ ಸುರೇಶ್ ಕೆ. ಅವರಿಗೆ ಬೀಳ್ಕೊಡುಗೆ ಸಮಾರಂಭ ಆ.30 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ವತಿಯಿಂದ ಸುರೇಶ್ ಭಟ್ ಹಾಗೂ ಶ್ರೀಮತಿ ಅನುಸೂಯ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಇಇ ಹರೀಶ್ ಕೆ. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ , ಬಂಟ್ವಾಳದ ಎಇಇ ನಾರಾಯಣ ಭಟ್, ಲೆಕ್ಕಾಧಿಕಾರಿ ನಾರಾಯಣ ಶೆಣೈ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸೋಮಶೇಖರ ಪೈಕ, ನೌಕರರ ಸಂಘದ ಸುಂದರ ಕೆ., ಸದಾಶಿವ ಕೆ., ಅರುಣ್ ಉಪಸ್ಥಿತರಿದ್ದು ಶುಭಹಾರೈಸಿದರು. ತಾಂತ್ರಿಕ ಸಹಾಯಕ ಇಂಜಿನಿಯರ್ ಸುಪ್ರೀತ್, ಗುತ್ತಿಗೆದಾರ ಬಾಸ್ಕರ ಬಯಂಬು, ದಾಮೋದರ ಮಂಚಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಭಟ್ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಎಇಇ ಚಿದಾನಂದ, ಕಿರಿಯ ಇಂಜಿನಿಯರ್ ಗಳಾದ ಪ್ರಸಾದ್ ಕೆ.ವಿ., ಬೋರಯ್ಯ ಅಭಿಷೇಕ್ , ಮಹೇಶ್ ಕುಳ, ಕಡಬ ಎಇ ಸತ್ಯನಾರಾಯಣ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಸಾದ್ ಕೆ.ವಿ ಸ್ವಾಗತಿಸಿ, ಬೋರಯ್ಯ ಎಚ್. ವಂದಿಸಿದರು. ಕೈಲಾಶ್ ಶೆಣೈ ನಿರೂಪಿಸಿದರು. ಶ್ರೀಮತಿ ಕವನ ಪ್ರಾರ್ಥಿಸಿದರು.