ಮಂಡೆಕೋಲು ಗ್ರಾಮದ ಮಡಿವಾಳಮೂಲೆ ಮಹಾದೇವಿ ಭಜನಾ ಮಂದಿರದಲ್ಲಿ ಸೆ.26ರಿಂದ ಅ.3ರವರೆಗೆ ನಡೆಯಲಿರುವ ನವರಾತ್ರಿ ಕಾರ್ಯಕ್ರಮದ ಬಗ್ಗೆ ಪೂರ್ವ ಭಾವಿ ಸಭೆ ನಡೆಯಿತು.
ಸಭೆಯಲ್ಲಿ ನವರಾತ್ರಿ ಮೊದಲ ದಿನದಂದು ಬೆಳಿಗ್ಗೆ ಗಣಹೋಮ, ರಾತ್ರಿ ಗಂಟೆ 8 ರಿಂದ 9 ತನಕ ಭಜನಾ ಕಾರ್ಯಕ್ರಮ ಎಂಟು ದಿನ ನಡೆಯಲಿದೆ ಒಂಭತ್ತೇನೆ ದಿನ ರಾತ್ರಿ ಶ್ರೀ ಮಹಾದೇವಿ ದೊಂದಿ ಸೇವೆ, ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂದಿರದ ಪ್ರಧಾನ ಅರ್ಚಕರಾದ ಬಾಲಕೃಷ್ಣ, ಪ್ರಧಾನ ದೇವಿ ಪಾತ್ರಿ ಕುಶಲ ಮಡಿವಾಳಮೂಲೆ, ಆಡಳಿತ ಸಮಿತಿ ಗೌರವಧ್ಯಕ್ಷರು ಪೊಡಿಯ ಮಡಿವಾಳಮೂಲೆ, ಅಧ್ಯಕ್ಷರು ಸುನಿಲ್ ಶಿವಾಜಿನಗರ, ಕಾರ್ಯದರ್ಶಿ ಪ್ರಶಾಂತ್ ಮಡಿವಾಳಮೂಲೆ, ಕೋಶಾಧಿಕಾರಿ ಹರಿಶ್ಚಂದ್ರ ಮಡಿವಾಳಮೂಲೆ, ಚರಣ್ ಕುಮಾರ್, ವಸಂತ, ಸುಂದರ, ವಿಶ್ವನಾಥ, ರಮೇಶ್, ಉತ್ತಯ್ಯ, ಬಾಲಕೃಷ್ಣ, ಅನಿಲ್, ಆನಂದ ಕೆ, ಮಿಥುನ್, ಶುಭಶ್ಚಂದ್ರ, ಶಂಕರ, ದಿನೇಶ, ಹರೀಶ, ಸುರೇಶ, ಕಮಲಾಕ್ಷ, ಸಂದೇಶ, ಅಶ್ವಥ್, ಸಂದೀಪ್, ಅಶೋಕ, ಸಂಜೀವ, ಚಂದ್ರಶೇಖರ ಸಭೆಯಲ್ಲಿ ಉಪಸ್ಥಿತರಿದ್ದರು.