Ad Widget

ಬಳ್ಪ ವಿಕ್ರಮ ಯುವಕ ಮಂಡಲ ವಠಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಬಳ್ಪ ವಿಕ್ರಮ ಯುವಕ ಮಂಡಲ ವಠಾರದಲ್ಲಿ ಆ. 28ರಂದು ಬಳ್ಪ ವಿಕ್ರಮ ಯುವಕ ಮಂಡಲ ಮತ್ತು ಶ್ರೀ ಧರ್ಮ ಶಾಸ್ತಾವು ಜಭನಾ ಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ 18 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.ಕಾರ್ಯಕ್ರಮವನ್ನು ಪದ್ಮನಾಭ ರೈ ಅಗೋಳಿಬೈಲುಗುತ್ತು ಉದ್ಘಾಟಿಸಿದರು.

. . . . . . . . .

ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಮಾಜಿ ನಿರ್ದೇಶಕ ಆನಂದ ಚೆನ್ನಕಜೆ, ಬಳ್ಪ ಗ್ರಾ. ಪಂ. ಉಪಾಧ್ಯಕ್ಷ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಸ.ಉ.ಹಿ.ಪ್ರಾ. ಶಾಲೆ ಬಳ್ಪ ಇದರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉಮೇಶ್ ಪೂಜಾರಿ ಬುಡೆಂಗಿ, ಧರ್ಮಶಾಸ್ತಾವು ಭಜನಾ ಮಂಡಳಿಯ ಅಧ್ಯಕ್ಷ ಸುರೇಶ್ ಆಲ್ಕಬೆ, ದೈಹಿಕ ಶಿಕ್ಷಕ ಪ್ರದೀಪ್ ಹೊಪ್ಪಾಳೆ, ಯುವಕ ಮಂಡ ನಿಕಟಪೂರ್ವ ಅಧ್ಯಕ್ಷ ಪ್ರಸನ್ನ ವೈ.ಟಿ, ಅಧ್ಯಕ್ಷ ಶಶಿಧರ ಎಣ್ಣೆಮಜಲು ಹಾಗೂ ಕಾರ್ಯದರ್ಶಿ ಗಗನ್ ಕಟ್ಟೆಮನೆ ಉಪಸ್ಥಿತಿತರಿದ್ದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ನೂತನ ಪದಾಧಿಕಾರಿಗಳಿಗೆ ಪದಗ್ರಹಣವನ್ನು ಆನಂದ ಚೆನ್ನಕಜೆ ನೆರವೇರಿಸಿದರು.

. . . . . . .

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮೊಸರು ಕುಡಿಕೆ, ಹಗ್ಗ ಜಗ್ಗಾಟ, ತ್ರೋಬಾಲ್ ಲಗೋರಿ ಹಾಗೂ ಇನ್ನಿತರ ಸ್ಪರ್ಧೆ ನಡೆಯಿತು.

ಸಮರೂಪ ಸಮಾರಂಭ

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗ್ರಾ. ಪಂ. ಅಧ್ಯಕ್ಷರ ಶ್ರೀಮತಿ ಶಶಿಕಲಾ ಸೂಂತಾರು, ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಪಠೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಪುರುಷೋತ್ತಮ ಅಮ್ಮಣ್ಣಾಯ ಮೂಡೂರು, ಜಯರಾಮ ಆಲ್ಕಬೆ, ರಮಾನಂದ ಎಣ್ಣೆಮಜಲು, ಆನಂದ ಚೆನ್ನಕಜೆ, ಭಾಸ್ಕರ ಕೊರಪ್ಪಣೆ, ಪ್ರಸನ್ನ ವೈ.ಟಿ ಉಪಸ್ಥಿತಿತರಿದ್ದರು.

ಬಳ್ಪದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ ಪಿ. ರಾಮಕೃಷ್ಣ ಭಟ್ ಇವರಿಗೆ ಪುರುಷೋತ್ತಮ ಅಮ್ಮಣ್ಣಾಯ ಮೂಡೂರವರಿಂದ ಸನ್ಮಾನವನ್ನು ನೆರವೇರಿಸಿದರು. . ಪ್ರಸನ್ನ ವೈ.ಟಿ ಸನ್ಮಾನ ಪತ್ರ ವಾಚಿಸಿದರು. ಕು. ಭವಿಕಾ ಕುಳ ಪ್ರಾರ್ಥಿಸಿ ಗಗನ್ ಕಟ್ಟೆಮನೆ ಸ್ವಾಗತಿಸಿ, ಮಹೇಶ್ ಗೆಜ್ಜೆ ವಂದಿಸಿ, ರಜನೀಶ್ ಕುಳ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading