ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಆಶ್ರಯದಲ್ಲಿ ಆ.27 ರಂದು ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿ ಕಾವೇರಿ ಸಂಜೀವಿನಿ ಸಂಘ ಉದ್ಘಾಟನೆಗೊಂಡಿತು. ನೂತನ ಸಂಘದ ಅಧ್ಯಕ್ಷರಾಗಿ ಹೇಮಲತಾ ಮನಮೋಹನ್ ಕುಳ್ಳಂಪಾಡಿ, ಕಾರ್ಯದರ್ಶಿಯಾಗಿ ಸುಮಲತಾ ಪ್ರಕಾಶ್ ಕುಳ್ಳಂಪಾಡಿ ಆಯ್ಕೆಯಾದರು.
ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಹಾಗೂ ಎಲ್.ಸಿ.ಆರ್.ಪಿ ಶಾರದಾ ಉಪಸ್ಥಿತರಿದ್ದು, ಸಂಜೀವಿನಿ ಸಂಘದ ಮಾಹಿತಿ ನೀಡಿ ಸಂಘದ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯವರಿಗೆ ಸಂಘದ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ