ಸುಳ್ಯ ನಗರ ದಲ್ಲಿ ಆಗಸ್ಟ್ 29ರಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ವಾಹನ ಮೆರವಣಿಗೆ ಇರುವ ಹಿನ್ನೆಲೆಯಲ್ಲಿ ಪೂರ್ವಾಹ್ನ 9.30ರಿಂದ 11.00ರ ತನಕ ನಗರದ ಮುಖ್ಯರಸ್ತೆಯಲ್ಲಿ ಕಾಯರ್ತೋಡಿ ವಿಷ್ಣು ಸರ್ಕಲ್ ನಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ (ಜ್ಯೋತಿ ಸರ್ಕಲ್ ) ತನಕ ವಾಹನ ನಿಲುಗಡೆ ಮಾಡದಂತೆ ನಗರ ಪಂಚಾಯತ್ ಸೂಚಿಸಿದೆ. ವಾಹನ ನಿಲುಗಡೆಗಾಗಿ ಚೆನ್ನಕೇಶವ ದೇವಸ್ಥಾನ ಮೈದಾನ, ಎಪಿಎಂಸಿ ಪ್ರಾಂಗಣ ಗಳನ್ನು ಬಳಸಿಕೊಳ್ಳಲು ವಿನಂತಿಸಲಾಗಿದೆ. ಅಲ್ಲದೆ ಪಂಚಾಯತ್ ಬಸ್ ನಿಲ್ದಾಣದಲ್ಲಿ 9.30ರಿಂದ ನಾಟಕ ಪ್ರದರ್ಶನ ಹಾಗೂ 10.30ಕ್ಕೆ ಪ್ರತಿಮೆ ಆಗಮನ ಇರುವುದರಿಂದ ಪಂಚಾಯತ್ ಬಸ್ ನಿಲ್ದಾಣದಲ್ಲಿ 11.00 ಗಂಟೆಯ ತನಕ ವ್ಯಾನ್ ಹಾಗೂ ಬಸ್ ಗಳನ್ನು ನಿಲ್ಲಿಸದೆ ಸಹಕರಿಸಬೇಕಾಗಿ ನಗರ ಪಂಚಾಯತ್ ಪ್ರಕಟಣೆ ಯಲ್ಲಿ ತಿಳಿಸಿದೆ.
- Wednesday
- May 21st, 2025