ಗ್ರಾಮಜನ್ಯ ,ರೈತ ಉತ್ಪಾದಕ ಸಂಸ್ಥೆ ಪುತ್ತೂರು ಇದರ ವತಿಯಿಂದ ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಜೇನು ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆ.26 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿ ಗಳಾಗಿ ಗ್ರಾಮಜನ್ಯ ಸಂಸ್ಥೆಯ ಅಧ್ಯಕ್ಷರೂ, ನಿವೃತ್ತ ಕಸ್ಟಮ್ಸ್ ಅಧಿಕಾರಿಗಳೂ ಆದ ಶ್ರೀ ರಾಮಕೃಷ್ಣ ಭಟ್ ಕುರುಂಬುಡೇಲು ಮಾಹಿತಿ ನೀಡಿದರು. ಯುವ ಜನಾಂಕ ಪ್ರಕೃತಿ ಗೆ ಪೂರಕವಾದ ಜೇನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆ ಬಗ್ಗೆ ತಿಳಿಸಿದರು. ಕಾಲೇಜು ಪ್ರಾಂಶುಪಾಲರಾದ ಡಾ ಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀ ಸೀತಾರಾಮ ಮುಂಡಾಲ , ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಜೇಶ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐ.ಕ್ಯು.ಎ.ಸಿ ಸಂಚಾಲಕರು ಹಾಗೂ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥರಾದ ಶ್ರೀ ಪದ್ಮನಾಭ ನೆಟ್ಟಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕು. ಹರ್ಷಿತಾ ಮತ್ತು ಬಳಗದವರು ಪ್ರಾರ್ಥಿಸಿದರು , ಕು.ಸುಶ್ಮಿತಾ ವಂದಿಸಿದರು , ಕು.ರಶ್ಮಿ ಕೆ.ಎಲ್ ಕಾರ್ಯಕ್ರಮ ನಿರೂಪಿಸಿದರು.