ಅರಂತೋಡು ಗ್ರಾಮ ಪಂಚಾಯಿತಿಯ 2022-23 ನೇ ಸಾಲಿನ ಜಮಾಬಂದಿ ವಿಶೇಷ ಗ್ರಾಮ ಸಭೆ ಆ. 26 ರಂದು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆಸಲಾಯಿತು . ಸಭೆಯಲ್ಲಿ ನೋಡೆಲ್ ಅಧಿಕಾರಿ ಸುಂದರ್ ಎಂ ಕೆ ಎಸ್. ಕಾ ನಿ. ಅಭಿಯಂತರರು ಕುಡಿಯುವ ನೀರು ನೈರ್ಮಲ್ಯ ವಿಭಾಗ ಸುಳ್ಯ , ಹರಿಣಿ ಡಿ ಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಕುಮಾರಿ ಶ್ವೇತಾ ಗ್ರಾಮ ಪಂಚಾಯತ್ ಅಧ್ಯಕ್ಷರು , ಪಂ ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಸದರಿ ಸಭೆಯಲ್ಲಿ 2021-22 ನೇ ಹಂತದಲ್ಲಿ ಗ್ರಾಮ ಪಂಚಾಯತ್ ನಲ್ಲಿ ಕೈಗೊಂಡ ಕಾಮಗಾರಿಗಳ ವರದಿಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಪದ್ಮಾವತಿ ಖಂಡಿಸಿದರು .
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ ಸಿಬ್ಬಂದಿ ಮೋಹನ್ ರವರು ವಂದನೆ ಸಲ್ಲಿಸಿದರು . ವಿಶೇಷ ಗ್ರಾಮಸಭೆಯ ನಂತರ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಲಾಯಿತು.