- Thursday
- November 21st, 2024
ಹಲವಾರು ವರ್ಷಗಳಿಂದ ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆಯಾಗಿರುವ ಬಿಎಂಟಿಸಿ ಅಪಘಾತ ರಹಿತ ಚಾಲಕರನ್ನು ಗುರುತಿಸಿ ಗೌರವಿಸಿದೆ. ಬೆಂಗಳೂರಿನಲ್ಲಿ ಇವರು ಬಸ್ ಚಾಲಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ವೃತ್ತಿ ಜೀವನದಲ್ಲಿ ಯಾವುದೇ ಅಪಘಾತಗಳಿಗೆ ಆಸ್ಪದ ನೀಡದೆ ಸುರಕ್ಷಿತವಾಗಿ ಬಸ್ ಚಾಲನೆಯನ್ನು ನಿರ್ವಹಿಸಿದಕ್ಕೆ ಬಿ.ಎಂ.ಟಿ.ಸಿ. ಅಪಘಾತ ರಹಿತ ಚಾಲಕರೆಂದು ಗುರುತಿಸಿ ಗೂನಡ್ಕದ ಎಂ.ಎ.ಬಾಷ ರವರಿಗೆ ಬೆಳ್ಳಿ ಪದಕ ನೀಡಿ...
ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಆ.28 ರಂದು ನಡೆಯಿತು. ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿ ಲೋಹಿತ್ ಚೈಪೆ, ಗೌರವಾಧ್ಯಕ್ಷರಾಗಿ ಮಾಧವ ಎರ್ದಡ್ಕ, ಉಪಾಧ್ಯಕ್ಷರಾಗಿ ಸಚಿನ್ ಮೊಟ್ಟೆ, ಜತೆ ಕಾರ್ಯದರ್ಶಿ ಜಯಪ್ರಕಾಶ್ ಬಾಕಿಲ, ಕೋಶಾಧಿಕಾರಿಯಾಗಿ. ವಿನ್ಯಾಸ್ ಕೊಚ್ಚಿ ಆಯ್ಕೆಯಾಗಿದ್ದಾರೆ. .
ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪ ಯೋಜನೆಯಡಿ ಹೊಸ ಮನೆ ನಿರ್ಮಾಣ ಮಾಡಲು ಸರಕಾರದಿಂದ ಒದಗಿಸಲಾಗುವ ರೂ.5 ಲಕ್ಷ ಮೊತ್ತದ ಪರಿಹಾರ ಧನದ ಮೊದಲ ಹಂತದ ರೂ.95,100 ಮೊತ್ತದ ಚೆಕ್ ನ್ನು 7 ಜನ ಫಲಾನುಭವಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರು...
ಡಿ.ಜೆ ಮೀನಾಕ್ಷಿ ದೇವಶ್ಯ ನಿಧನ ಗುತ್ತಿಗಾರು ಗ್ರಾಮದ ದಿ.ಜಿನ್ನಪ್ಪ ಗೌಡರ ಪತ್ನಿ ಡಿ.ಜೆ ಮೀನಾಕ್ಷಿ ದೇವಶ್ಯ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಆ.27) ನಿಧನರಾಧರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರೋಹಿತಾಶ್ವ ದೇವಶ್ಯ, ಜನಾರ್ಧನ ದೇವಶ್ಯ, ಚಂದ್ರಶೇಖರ ದೇವಶ್ಯ ಹಾಗೂ ಪುತ್ರಿಯರಾದ ಭಾನುಮತಿ ಗಂಗಾಧರ ಬಾಳಿಕಳ ಹಾಗೂ ತ್ರಿವೇಣಿ ಯಶವಂತ ಕೆಳಗಿನಮನೆ ಮತ್ತು ಕುಟುಂಬಸ್ಥರು...
ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ವತಿಯಿಂದ ಆ.12 ರಂದು ಪಿತಾಮಹ ಡಾ.ಎಸ್.ಆರ್.ರಂಗನಾಥನ್ ರವರ ಜನ್ಮದಿನೋತ್ಸವದ ಅಂಗವಾಗಿ ನಡೆದ ಸ್ಪರ್ಧಾ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮ ಆ.30 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ...
ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.25 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.ಇಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕದ ವಿದ್ಯಾರ್ಥಿಗಳು ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಿರಿಯ ವಿಭಾಗದಲ್ಲಿ ಕಥೆ ಹೇಳುವುದರಲ್ಲಿ ಪ್ರಜ್ಞಾ.ಪಿ.ಎಸ್ ಪ್ರಥಮ, ಕ್ಲೇ ಮಾಡಲಿಂಗ್ ನಲ್ಲಿ ಯನ್ವಿತ್ ಪ್ರಥಮ, ಇಂಗ್ಲಿಷ್ ಕಂಠಪಾಠದಲ್ಲಿ ಕವನ ಡಿ.ಯನ್...
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.09 ಶನಿವಾರದಂದು ಪೂರ್ವಾಹ್ನ 10:30ಕ್ಕೆ ಸಂಘದ ಪ್ರಧಾನ ಕಛೇರಿಯ ಸಭಾಭವನದಲ್ಲಿ ನಡೆಯಲಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಸಹಯೋಗದಲ್ಲಿ ಸುಳ್ಯ ತಾಲ್ಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾ ಕೂಟ ಅರಂತೋಡು ಪ್ರಾಥಮಿಕ ಶಾಲಾ ವಠಾರದಲ್ಲಿ ಆ..27ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ...
ಬೀಡಿ ಕಾರ್ಮಿಕರ ಸ್ಕಾಲರ್ ಶಿಪ್‌ಗೆ ಅರ್ಜಿ ಆಹ್ವಾನ ಬೀದಿ ಮಕ್ಕಳಿಗೆ ಸ್ಕಾಲರ್‌ಶಿಪ್ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಆಹ್ವಾನಿಸಲಾಗಿದೆ. 1 ನೇ ತರಗತಿಯಿಂದ 10 ನೇ ತರಗತಿಯವರೆಗಿನ ಅರ್ಜಿಗಳನ್ನು ಸೆಪ್ಟೆಂಬರ್ 30 ರೊಳಗೆ ಹಾಗೂ ಪದವಿ ಪೂರ್ವದಿಂದ ಉನ್ನತ ಶಿಕ್ಷಣಕ್ಕಾಗಿ ಅಕ್ಟೋಬರ್ ತಿಂಗಳ 31 ರವರೆಗೆ ಸಲ್ಲಿಸಲು ಅವಕಾಶವಿದೆ . ಈ ವರ್ಷದಿಂದ ಸ್ಕಾಲರ್ ಶಿಪ್ ಮೊತ್ತ 1000...
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಮೊಗ್ರ ಮತ್ತು ಚಂದ್ರಶೇಖರ ನಂಗಾರು ಮಿತ್ರವೃಂದ ಕೊಲ್ಲಮೊಗ್ರ ಇದರ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗ್ರ, ಗ್ರಾಮ ಪಂಚಾಯತ್ ಕೊಲ್ಲಮೊಗ್ರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲಮೊಗ್ರ “ಎ” “ಬಿ”...
Loading posts...
All posts loaded
No more posts