
ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪಂಪ್ ಖರೀದಿಗೆಫ್ರೆಂಡ್ಸ್ ಸರ್ಕಲ್ ಕೃಷ್ಣ ನಗರ ಪಂಜ ಇದರ ವತಿಯಿಂದ ರೂ.27500 ದೇಣಿಗೆಯ ಹಸ್ತಾಂತರ ಕಾರ್ಯಕ್ರಮ ಆ.25 ರಂದು ಜರುಗಿತು. ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಡಾ|ದೇವಿಪ್ರಸಾದ್ ಕಾನತ್ತೂರ್, ಕಾರ್ಯದರ್ಶಿ ಲಿಗೋಧರ ಆಚಾರ್ಯ,ಪೂರ್ವಾಧ್ಯಕ್ಷರರಾದ ನಾರಾಯಣ ಕೃಷ್ಣನಗರ, ಚೆನ್ನಕೇಶವ ಆಚಾರ್ಯ ರವರುಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ನೇರಳ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ರವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು, ಎಸ್ .ಡಿ.ಎಂ ಸದಸ್ಯರಾದ ದೇವಿಪ್ರಸಾದ್ ಜಾಕೆ, ಗೋಪಾಲಕೃಷ್ಣ ಸಂಕಡ್ಕ ಮೊದಲಾದವರು ಉಪಸ್ಥಿತರಿದ್ದರು.