
ವಳಲಂಬೆಯಲ್ಲಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 19 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆ. 31 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ದುರ್ಗೇಶ್ ಪಾರೆಪ್ಪಾಡಿ, ಕಾರ್ಯದರ್ಶಿ ರವೀಂದ್ರ ಹೊಸೊಳಿಕೆ ತಿಳಿಸಿದ್ದಾರೆ.
ಆ. 31 ರಂದು ಬೆಳಿಗ್ಗೆ 9 ಗಂಟೆಗೆ ಗಣಪತಿ ಪ್ರತಿಷ್ಠೆ , ನಂತರ ಸಾರ್ವಜನಿಕ ಗಣಪತಿ ಹೋಮ, ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ಪುರುಷರಿಗೆ ಭಕ್ತಿಗೀತೆ, ಹಗ್ಗಜಗ್ಗಾಟ, ಮಹಿಳೆಯರಿಗೆ ಭಕ್ತಿಗೀತೆ, ಬಾಲ್ ಪಾಸಿಂಗ್, ಹಗ್ಗಜಗ್ಗಾಟ, ಶಾಲಾ ಮಕ್ಕಳಿಗೆ ದೇಶಭಕ್ತಿಗೀತೆ, ಭಕ್ತಿಗೀತೆ, ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ಸಂಜೆ ಗಂಟೆ 3 ರಿಂದ ಶ್ರೀ ಗಣೇಶನ ಶೋಭಾಯಾತ್ರೆ ನಡೆಯಲಿದೆ.