ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಜಮೀನು ಮಂಜೂರಾತಿಗೆ ತಹಶೀಲ್ದಾರ ಸುಳ್ಯ ಇವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಪೈಕ ಪ್ರಧಾನ ಕಾರ್ಯದರ್ಶಿ ರಂಜಿತ್ ಕೇರ್ಪಳ ಹಿಂದೂ ಜಾಗರಣಾ ವೇದಿಕೆಯ ಉಪಾಧ್ಯಕ್ಷ ಪ್ರಶಾಂತ ಕಾಯರ್ತೋಡಿ ಮತ್ತು ಗೋ ಶಾಲಾ ನಿರ್ವಹಣಾ ಸಂಯೋಜಕರಾದ ಜಿ ಜಗನ್ನಾಥ ಜಯನಗರ ಸುಳ್ಯ ಉಪಸ್ಥಿತರಿದ್ದರು.
- Thursday
- November 21st, 2024