ಸ್ಪಂದನ ಗೆಳೆಯಯರ ಬಳಗ ಅಡ್ತಲೆ ಇದರ 4ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮ ಆ. 21ರಂದು ಅಡ್ತಲೆಯ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲಾ ವಠಾರ ದಲ್ಲಿ ನಡೆಯಿತು.
ಬೆಳಿಗ್ಗೆ ಕಾರ್ಯಕ್ರಮವನ್ನು ಸ್ಪಂದನ ಗೆಳೆಯಯರ ಬಳಗದ ಗೌರವ ಸಲಹೆಗಾರಾದ ಶ್ರೀ ಭವಾನಿಶಂಕರ ಅಡ್ತಲೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಅತಿಥಿಗಳಾಗಿ ಆರಂತೋಡು ಪಂಚಾಯತ್ ಉಪಾಧ್ಯಕ್ಷರಾದ ಕು. ಶ್ವೇತಾ ಅರಮನೆಗಯಾ, ಅಡ್ತಲೆ ಬೆದ್ರುಪಣೆ ಉಳ್ಳಾಕುಳು ಹಾಗೂ ಮಲೆ ದೈವಗಳ ದೈವಸ್ಥಾನದ ಅಧ್ಯಕ್ಷರಾದ ಶ್ರೀ ಎ. ಕೆ. ಹರೀಶ್. ನಾಗರೀಕ ಹಿತಾ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಅಡ್ತಲೆ ಮತ್ತು ನಿವೃತ್ತ ಶಿಕ್ಷಕರಾದ ಶ್ರೀ ಗಣೇಶ ಮಾಸ್ತರ್ ಅಡ್ತಲೆ ಉಪಸ್ಥಿತರಿದ್ದರು.
ನಂತರ ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ವಿವಿಧ ಸ್ಪರ್ಧೆ ಗಳು ನಡೆದದವು.
ಸಮಾರೋಪ ಕಾರ್ಯಕ್ರಮ :
ಸಂಜೆ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಸ್ಪಂದನ ಗೆಳೆಯರ ಬಳಗ ಅಧ್ಯಕ್ಷರಾದ ಶ್ರೀ ವಿನಯ ಬೆದ್ರುಪಣೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆರಂತೋಡು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಹರಿಣಿ ದೇರಾಜೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಹರೀಶ್ ಕಂಜಿಪಿಲಿ, ಆರಂತೋಡು ತೋಡಿಕಾನ ಪ್ರಾಥಮಿಕ ಕೃಷಿ ಪತ್ತಿ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಸದಸ್ಯರಾದ ಶ್ರೀ ಕೇಶವ ಅಡ್ತಲೆ ಮತ್ತು ಶ್ರೀಮತಿ ಸುಜಯ ಲೋಹಿತ್ ಮೇಲೆ ಅಡ್ತಲೆ, ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಪಿಂಡಿಮನೆ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಮಾದವ. ಪಿ. ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೋಹನ ಅಡ್ತಲೆ ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಬಳಗದ ಸದಸ್ಯ ಶ್ರೀ ಪ್ರವೀಣ್ ಪಾನತ್ತಿಲ ಸ್ವಾಗತಿಸಿ, ಶ್ರೀ ಕಿಶೋರ್ ಅಡ್ಕ ವಂದಿಸಿದರು ಬಳಗ ಸದಸ್ಯ ಶ್ರೀ ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಣೆ ಮಾಡಿದರು.