Ad Widget

ಸುಳ್ಯ :- ಅಮೃತ ಸಾಹಿತ್ಯೋತ್ಸವ ಕಾರ್ಯಕ್ರಮ ಬಹುಭಾಷಾ ಕವಿಗೋಷ್ಠಿ, ಕಥಾಗೋಷ್ಠಿ. “ಗಮ್ಮತ್” ಪುಸ್ತಕ ಬಿಡುಗಡೆ, ಕಿರಣ ಗೌರವ ಸನ್ಮಾನ

. . . . . . .

ಜಲಶ್ರೀ ಪ್ರತಿಷ್ಠಾನ ಕಡ್ಲಾರು, ಕಿರಣರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು, ಕಲಾಮಾಯೆ(ರಿ.) ಏನೆಕಲ್ ಇವರ ವತಿಯಿಂದ ಆ.21 ರಂದು ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಅಮೃತ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿ, ಬಹುಭಾಷಾ ಕಥಾಗೋಷ್ಠಿ, ಅರೆಭಾಷೆ ಪದ್ಯಗಳ ಬುತ್ತಿ “ಗಮ್ಮತ್” ಪುಸ್ತಕ ಬಿಡುಗಡೆ, ಕಿರಣ ಗೌರವ ಸನ್ಮಾನ, ಜಲಶ್ರೀ ಪ್ರತಿಷ್ಠಾನ ಕಡ್ಲಾರು ಸಂಸ್ಥೆಯ ಲೋಗೋ ಬಿಡುಗಡೆ, ದೇಶ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆ ಹೀಗೆ ವಿವಿಧ ರೀತಿಯ ಸಾಹಿತ್ಯ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ಹಳೆ ಬೇರು, ಹೊಸ ಚಿಗುರು ಎಂಬಂತೆ ಹಿರಿಯ ಸಾಹಿತಿಗಳಿಗೆ ಗುರು ಸ್ಥಾನ, ಹೊಸ ಮುಖಗಳಿಗೆ ಅವಕಾಶ ಕೊಟ್ಟು ಅವರನ್ನು ಬೆಳೆಸುವ ಉದ್ದೇಶದಿಂದ ಸಂಘಟಿಸಿದ “ಅಮೃತ ಸಾಹಿತ್ಯೋತ್ಸವ” ಯಶಸ್ವಿಯಾಗಿ ನಡೆದು ಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿತು. ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಸಿ.ಡಿ.ಪಿ.ಓ ನೀರಬಿದಿರೆ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಬಾಬು ಗೌಡ ಅಚ್ರಪ್ಪಾಡಿ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಕೊರೋನಾ ಸಮಯದಲ್ಲಿ ಆಯೋಜಿಸಿದ “ಆನ್ಲೈನ್ ಅರೆಭಾಷೆ ಪದ್ಯ ಕವನಗಳ ಗಮ್ಮತ್” ಕಾರ್ಯಕ್ರಮದ ಸಂಪಾದಿತ ಕೃತಿ “ಗಮ್ಮತ್” ಪುಸ್ತಕವನ್ನು ಯೋಗೀಶ್ ಹೊಸೊಳಿಕೆ ರಚಿಸಿದ್ದು ಕೃತಿಯನ್ನು ನಿವೃತ್ತ ಉಪನ್ಯಾಸಕಿ ಲೀಲಾ ದಾಮೋದರ ಅವರು ಬಿಡುಗಡೆಗೊಳಿಸಿದರು. ಹಿರಿಯ ಸಾಹಿತಿ ಎ.ಕೆ ಹಿಮಕರ ಕೃತಿ ಪರಿಚಯಿಸಿದರು.
ಪ್ರತಿಭಾವಂತರಾಗಿದ್ದ ವಿಶ್ವದೀಪ್ ಕುಂದಲ್ಪಾಡಿ ಅವರು ನಮ್ಮನ್ನು ಅಗಲಿದ್ದಾರೆ. ಅವರು ಗಮ್ಮತ್ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. “ಗಮ್ಮತ್” ಪುಸ್ತಕದಲ್ಲೂ ಅವರು ಹಾಡಿದ ಹಾಡು ಅಡಕವಾಗಿದೆ. ಈ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅವರನ್ನು ನೆನೆದು ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಜಲಶ್ರೀ ಪ್ರತಿಷ್ಠಾನ ಕಡ್ಲಾರು ಈ ಸಂಸ್ಥೆಯ ಲೋಗೋವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ವಳಲಂಬೆ ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪುರ್ಲುಮಕ್ಕಿ, ಮಾಜಿ ಸೈನಿಕರಾದ ದುಗ್ಗಪ್ಪ ಗೌಡ ಕೊರತ್ತೋಡಿ, ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಮೋಂಟಡ್ಕ, ನವಚೇತನ ಯುವಕ ಮಂಡಲ ಬೋಳುಬೈಲು ಇದರ ಅಧ್ಯಕ್ಷರಾದ ಶಶಿಪ್ರಸಾದ್ ಕಾಟೂರು ಹಾಗೂ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಅಧ್ಯಕ್ಷರಾದ ನಿರಂಜನ ಕಡ್ಲಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿರಣರಂಗ ಅದ್ಯಯನ ಸಂಸ್ಥೆಯ ಅಧ್ಯಕ್ಷರಾದ ಸಾಹಿತಿ ಯೋಗೀಶ್ ಹೊಸೊಳಿಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಯೋಗಗುರು ಶರತ್ ಮರ್ಗಿಲಡ್ಕ ಸ್ವಾಗತಿಸಿ, ಕಲಾಮಾಯೆ ಅಧ್ಯಕ್ಷರಾದ ಸುಧೀರ್ ಏನೆಕಲ್ ವಂದಿಸಿದರು. ವಿನೋದ್ ಮೂಡಗದ್ದೆ ಮತ್ತು ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.
ಬಹುಭಾಷಾ ಕವಿಗೋಷ್ಠಿ :- ಸುಳ್ಯ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಜನಾರ್ಧನ ಕಣಕ್ಕೂರು ಇವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಪಲ್ಲವಿ ಕಂದ್ರಪ್ಪಾಡಿ, ಪೆರುಮಾಳ್ ಲಕ್ಷ್ಮಣ ಐವರ್ನಾಡು, ಜಶ್ಮಿತಾ ಕಂದ್ರಪ್ಪಾಡಿ, ಅಂಕಿತಾ ಕಡ್ಲಾರು, ಅನುರಾಧ ಶಿವಪ್ರಕಾಶ್ ಉಬರಡ್ಕ, ತೇಜಸ್ವಿನಿ ನೆರ್ಪು, ಉದಯ ಭಾಸ್ಕರ್ ಸುಳ್ಯ, ಪೂರ್ಣಿಮಾ.ಟಿ ಪೆರ್ಲಂಪಾಡಿ, ಇಂಚರಾ.ಎಸ್.ಕೆ ಪಡ್ರೆ, ಉಲ್ಲಾಸ್ ಕಜ್ಜೋಡಿ, ಚುಂಚನಾ.ಪಿ ಕಡೀರ ಇವರುಗಳು ಕವನಗಳನ್ನು ವಾಚಿಸಿದರು.
ಸೌಮ್ಯ ಸಿ.ಡಿ ಎಲಿಮಲೆ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಹುಭಾಷಾ ಕಥಾಗೋಷ್ಠಿ :- ಹಿರಿಯ ಸಾಹಿತಿಗಳಾದ ತೇಜಕುಮಾರ್ ಬಡ್ಡಡ್ಕ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕಥಾಗೋಷ್ಠಿ ವಿಶಿಷ್ಟ ರೀತಿಯಲ್ಲಿ ನಡೆಯಿತು. ಕಥೆಗಾರರಾಗಿ ಎಚ್.ಭೀಮರಾವ್ ವಾಷ್ಠರ್ ಸುಳ್ಯ, ಸಾನು ಉಬರಡ್ಕ, ಚಂದ್ರಾವತಿ ಬಡ್ಡಡ್ಕ, ಚಿದಾನಂದ ಪರಪ್ಪ, ಆದ್ಯಂತ್ ಅಡೂರು, ಪ್ರವೀಣ್ ಆಚಾರ್ಯ ಪೇರಳಕಟ್ಟೆ, ಮಹೇಶ್ ಕೊಯಿಂಗಾಜೆ, ತಮ್ಮ ತಮ್ಮ ಕಥೆಗಳನ್ನು ಓದುವ ಮೂಲಕ ಜನ ಮನಗೆದ್ದರು.
ಪದ್ಮನಾಭ ಸೇವಾಜೆ ಬಹುಭಾಷಾ ಕಥಾಗೋಷ್ಠಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರೋಪ ಸಮಾರಂಭ :- ನೀರಬಿದಿರೆ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕೊರೋನಾ ಸಮಯದಲ್ಲಿ ನಡೆದ ಅರೆಭಾಷೆ ಪದ್ಯ ಕವನಗಳ ಗಮ್ಮತ್ ಆನ್ಲೈನ್ ಕಾರ್ಯಕ್ರಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ರಮ್ಯ ಅಡ್ಕಾರ್ ಮತ್ತು ಪ್ರಾಪ್ತಿ ಗೌಡ ಅರಂತೋಡು ಅವರಿಗೆ ಕಿರಣ ಗೌರವ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನವನ್ನು ಸಾಹಿತಿ ಹಾಗೂ ವಕೀಲರಾದ ಕೆ.ಆರ್ ವಿದ್ಯಾಧರ ಕುಡೆಕಲ್ಲು ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಿರಂಜನ ಕಡ್ಲಾರು ರಚನೆಯ ಅಂಕಿತಾ ಕಡ್ಲಾರು ಹಾಡಿದ ದೇಶ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ನೀರಬಿದಿರೆ ನಾರಾಯಣ ಅವರು “ನಾವು ಜಗತ್ತಿಗೆ ಬರುವಾಗ ಹೆಸರಿರುವುದಿಲ್ಲ ಉಸಿರಿರುತ್ತದೆ, ಜಗತ್ತನ್ನು ತೊರೆಯುವಾಗ ಉಸಿರಿರುವುದಿಲ್ಲ ಹೆಸರಿರುತ್ತದೆ. ಅದು ಒಳ್ಳೆಯ ಹೆಸರು ಇರಬಹುದು ಅಥವಾ ಕೆಟ್ಟ ಹೆಸರು ಇರಬಹುದು. ನಮ್ಮ ಹೆಸರು ಸ್ಥಿರಸ್ಥಾಯಿಯಾಗಿ ಉಳಿಯಲು ಒಳ್ಳೆಯ ಕೆಲಸಗಳನ್ನು ಮಾಡಬೇಕು, ಒಳ್ಳೆಯ ಸಾಹಿತ್ಯಗಳನ್ನು ಬರೆಯಬೇಕು, ಇದಕ್ಕಿಂತ ಹೆಚ್ಚಾಗಿ ಒಳ್ಳೆಯ ಮನಸ್ಸನ್ನು ಹೊಂದಿರಬೇಕು ಎಂದ ಅವರು ಒಂದು ಮಹಾ ಯಾತ್ರೆ ಆರಂಭವಾಗುವುದು ಒಂದು ಪುಟ್ಟ ಹೆಜ್ಜೆಯಿಂದ, ಮಹಾಗ್ರಂಥ ರೂಪುಗೊಳ್ಳುವುದು ಒಂದು ಅಕ್ಷರದಿಂದ ಹಾಗಾಗಿ ನಾವು ಅಕ್ಷರಗಳನ್ನು ಮತ್ತು ಹೆಜ್ಜೆಗಳನ್ನು ಜೋಪಾನವಾಗಿ ಇಡಬೇಕು” ಎಂದರು.
ವೇದಿಕೆಯಲ್ಲಿ ಬಾಳಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಕಿರಣರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ ಹೊಸೊಳಿಕೆ, ಕಲಾಮಾಯೆ ಅಧ್ಯಕ್ಷರಾದ ಸುಧೀರ್ ಏನೆಕಲ್, ಜಲಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ನಿರಂಜನ ಕಡ್ಲಾರು ಉಪಸ್ಥಿತರಿದ್ದರು.
ಭಾಗವಹಿಸಿದ ಎಲ್ಲಾ ಕವಿಗಳಿಗೆ, ಕಥೆಗಾರರಿಗೆ ಅಭಿನಂದನಾ ಪತ್ರ ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ನಿರಂಜನ ಕಡ್ಲಾರು ಸ್ವಾಗತಿಸಿ, ಶರತ್ ಮರ್ಗಿಲಡ್ಕ ವಂದಿಸಿದರು. ವಿನೋದ್ ಮೂಡಗದ್ದೆ ಹಾಗೂ ಪ್ರವೀಣ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!