ಸುಳ್ಯ ನಗರ ಪಂಚಾಯತ್ ನಲ್ಲಿ ಅನಧಿಕೃತ ಬ್ಯಾನರ್ ಗಳ ಕುರಿತು ಆ.20 ರಂದು ಸಮಾಲೋಚನಾ ಸಭೆ ನಡೆಯಲಿದೆ. ಸರ್ಕಾರಿ ಕಾರ್ಯಕ್ರಮ ಹೊರತುಪಡಿಸಿ ಉಳಿದೆಲ್ಲಾ ಬ್ಯಾನರ್ ಗಳಿಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಲು ನಗರ ಪಂಚಾಯತ್ ನಿರ್ಣಯಿಸಿದೆ ಎಂದು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದರು.
ಈ ಬ್ಯಾನರ್ ಶುಲ್ಕವನ್ನು ಕಡಿಮೆ ಮಾಡಿ ಕಡ್ಡಾಯವಾಗಿ ಮಾಡುವಂತೆ ಸಭೆಯಲ್ಲಿ ಮುದ್ರಕರು ಸಲಹೆ ಸೂಚಿಸಿ. ಆನ್‌ಲೈನ್ ಅನುಮತಿ ಮತ್ತು ಅನುಮತಿಗೆ ಸ್ಟಿಕರ್ ವಿತರಣೆ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗಿದೆ ಎಂದು ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಆರೋಗ್ಯ ನಿರೀಕ್ಷಕರು, ಬ್ಯಾನರ್ ಮುದ್ರಣ ಸಂಸ್ಥೆಯ ಮಾಲಕರು ಉಪಸ್ಥಿತರಿದ್ದರು.