ಕನಕಮಜಲು, ಜಾಲ್ಸೂರು, ಮಂಡೆಕೋಲು, ಅಜ್ಜಾವರ, ಅಮರಮುಡ್ನೂರು, ಉಬರಡ್ಕ ಗ್ರಾಮಗಳನ್ನು ಒಳಗೊಂಡ ಶಾಖಾ ಕಛೇರಿ ಇಂದು ಜಾಲ್ಸೂರು ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಸಚಿವ ಎಸ್.ಅಂಗಾರ ರವರು ಕಛೇರಿ ಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಅನಿತಾ ಲಕ್ಷ್ಮೀ, ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಜಾಲ್ಸೂರು ಶಾಖಾ ಜೆಇ ಮಹೇಶ್ ಕುಳ, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಗ್ರಾ.ಪಂ.ಅಧ್ಯಕ್ಷರು ಹಾಗೂ ಸಿಬ್ಬಂದಿಗಳು, ಮೆಸ್ಕಾಂ ಸಿಬ್ಬಂದಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಉಬರಡ್ಕ ಗ್ರಾಮಸ್ಥರ ಆಕ್ಷೇಪ
ಉಬರಡ್ಕ ಗ್ರಾಮವನ್ನು ಜಾಲ್ಸೂರು ಶಾಖಾ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದರಿಂದ ಕಛೇರಿ ಕೆಲಸಗಳಿಗಾಗಿ ಜಾಲ್ಸೂರಿಗೆ ತೆರಳಬೇಕಾಗುತ್ತದೆ. ಇದರಿಂದ ನಮ್ಮ ಗ್ರಾಮದ ಜನರಿಗೆ ತೊಂದರೆ ಆಗುತ್ತದೆ. ಆದುದರಿಂದ ಸುಳ್ಯ ಶಾಖೆಯಲ್ಲಿಯೇ ಉಬರಡ್ಕ ಗ್ರಾಮವನ್ನು ಉಳಿಸಿಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.