ಜಲಶ್ರೀ ಪ್ರತಿಷ್ಠಾನ ಕಡ್ಲಾರು, ಕಿರಣರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು, ಕಲಾಮಾಯೆ ಏನೆಕಲ್ ಇವುಗಳ ವತಿಯಿಂದ ಆ.21 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಅಮೃತ ಸಾಹಿತ್ಯೋತ್ಸವ ನಡೆಯಲಿದ್ದು, ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ನಿವೃತ್ತ ಸಿ.ಡಿ.ಪಿ.ಓ ನೀರಬಿದಿರೆ ನಾರಾಯಣ ಅವರು ವಹಿಸಿಕೊಳ್ಳಲಿದ್ದು, ನಿವೃತ್ತ ಪ್ರಾಂಶುಪಾಲರಾದ ಬಾಬು ಗೌಡ ಅಚ್ರಪ್ಪಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆನ್ಲೈನ್ ನಲ್ಲಿ ಈ ಹಿಂದೆ ನಡೆದ “ಅರೆಭಾಷೆ ಪದ್ಯ ಕವನಗಳ ಗಮ್ಮತ್” ಕಾರ್ಯಕ್ರಮದ ಪುಸ್ತಕ “ಗಮ್ಮತ್” ಅನ್ನು ನಿವೃತ್ತ ಉಪನ್ಯಾಸಕಿ ಲೀಲಾದಾಮೋಧರ ಅವರು ಬಿಡುಗಡೆ ಮಾಡಲಿದ್ದು, ಹಿರಿಯ ಸಾಹಿತಿ ಎ.ಕೆ ಹಿಮಕರ ಕೃತಿ ಪರಿಚಯ ಮಾಡಲಿದ್ದಾರೆ.
ಬೆಳಿಗ್ಗೆ 10:30 ರಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಸುಳ್ಯ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜನಾರ್ಧನ ಕಣಕ್ಕೂರು ರವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕವಿಗೋಷ್ಠಿಯಲ್ಲಿ ಪಲ್ಲವಿ ಕಂದ್ರಪ್ಪಾಡಿ, ಪೆರುಮಾಳ್ ಲಕ್ಷ್ಮಣ ಐವರ್ನಾಡು, ಜಶ್ಮಿತಾ ಕಂದ್ರಪ್ಪಾಡಿ, ದೇವಿಪ್ರಸಾದ್ ಕಾಯರ್ತೋಡಿ, ತೇಜೇಶ್ವರ ಕುಂದಲ್ಪಾಡಿ, ಅಂಕಿತಾ ಕಡ್ಲಾರು, ಅನುರಾಧ ಶಿವಪ್ರಕಾಶ್ ಉಬರಡ್ಕ, ತೇಜಸ್ವಿನಿ ನೆರ್ಪು, ಉದಯಭಾಸ್ಕರ್ ಸುಳ್ಯ, ಇಂಚರ.ಎಸ್.ಕೆ ಪಡ್ರೆ, ಉಲ್ಲಾಸ್ ಕಜ್ಜೋಡಿ, ಚುಂಚನಾ.ಪಿ ಗೌಡ ಕಡೀರ ಇವರುಗಳು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11:30 ರಿಂದ ಕಥಾಗೋಷ್ಠಿ ಹಿರಿಯ ಸಾಹಿತಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಥೆಗಾರರಾಗಿ ಎಚ್.ಭೀಮರಾವ್ ವಾಷ್ಠರ್ ಸುಳ್ಯ, ಸಾನು ಉಬರಡ್ಕ, ಚಂದ್ರಾವತಿ ಬಡ್ಡಡ್ಕ, ಚಿದಾನಂದ ಪರಪ್ಪ, ಅದ್ಯಂತ್ ಅಡೂರು, ಪ್ರವೀಣ್ ಆಚಾರ್ಯ ಪೇರಳಕಟ್ಟೆ, ಮಹೇಶ್ ಕೊಯಿಂಗಾಜೆ ಇವರುಗಳು ಭಾಗವಹಿಸಲಿದ್ದಾರೆ. ಮದ್ಯಾಹ್ನ 12:30 ರಿಂದ ಸಮಾರೋಪ ಸಮಾರಂಭ ಹಾಗೂ ಕಿರಣ ಗೌರವ ಸನ್ಮಾನ ನಡೆಯಲಿದ್ದು, ರಮ್ಯಾ ಅಡ್ಕಾರು ಮತ್ತು ಪ್ರಾಪ್ತಿ ಗೌಡ ಅರಂತೋಡು ಇವರಿಗೆ ಸನ್ಮಾನ ನಡೆಯಲಿದ್ದು, ಸನ್ಮಾನವನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಯುವ ಒಕ್ಕೂಟ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ್ ತುದಿಯಡ್ಕ, ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಮೋಂಟಡ್ಕ, ಬಾಳಿಲ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಭಿಮಾನಿಗಳು ಭಾಗವಹಿಸಬೇಕೆಂದು ಕಿರಣರಂಗ ಅಧ್ಯಯನ ಸಂಸ್ಥೆ ಗುತ್ತಿಗಾರು ಇದರ ಯೋಗೀಶ್ ಹೊಸೊಳಿಕೆ, ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ನಿರಂಜನ ಕಡ್ಲಾರು, ಕಲಾಮಾಯೆ ಏನೆಕಲ್ ಇದರ ಸುಧೀರ್ ಏನೆಕಲ್ ತಿಳಿಸಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ