ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸ್ವಾಮಿಜಿಯವರು ಮಾತನಾಡಿ ಭಕ್ತಿಯಿಂದ ಮಾಡಿದ ಕರ್ಮ ಶ್ರೇಷ್ಠ. ಯಾವುದೇ ಕಾರ್ಯಕ್ಕೆ ಇಳಿಯುವ ಮೊದಲು ಅದರ ಒಳಿತು ಕೆಡುಕಗಳ ಬಗ್ಗೆ ಅಲೋಚಿಸಬೇಕು. ಶ್ರೀ ಕೃಷ್ಣನು ದುಷ್ಟರ ಸಂವಾಹರ ಮಾಡಿ ಶಿಷ್ಟರ ರಕ್ಷಣೆ ಮಾಡಿದ. ನಾವು ದುಷ್ಟ ಬುದ್ದಿಗಳಿಂದ ದೂರ ಇದ್ದು ಒಳ್ಳೆಯ ಗುಣ ನಡೆತೆಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು.ಗುರು ಹಿರಿಯರನ್ನು ,ತಂದೆ ತಾಯಿರನ್ನು ಗೌರವದಿಂದ ಕಾಣಬೇಕೆಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಸಾಯಿ ಗೀತಾ ಮಾತನಾಡಿ ಮಾನವ ಜನ್ಮ ಶ್ರೇಷ್ಠ ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಜೀವನದಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಜನರಿಗೆ ಸಹಾಯ ಮಾಡುವುದು ಶ್ರೇಷ್ಠದಾನವಾಗುತ್ತದೆ ಎಂದು ಅವರು ಹೇಳಿದರು.
ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ರೇಖಾ, ಲೋಕೇಶ ಅಡ್ಡಂತಡ್ಕ,ಸುಳ್ಯ ಉದ್ಯಾನವನ ಆಸ್ಪತ್ರೆಯ ಸೂಪರ್ ಡೆಂಟ್ ಹೇಮಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಆಶ್ರಮದ ಟ್ರಸ್ಟಿಗಳಾದ ಅನಿಲ್ ಬಿ.ವಿ,ಕುಶಾಲಪ್ಪ ಗೌಡ,ಜನಾರ್ಧನ ಮಾಸ್ಟರ್, ಪ್ರಣವಿ ಮತ್ತು ಮೇಗಶ್ಯಾಮ್ ಅಡ್ಪಂಗಾಯ ಇತರರು ಉಪಸ್ಥಿತರಿದ್ದರು. ಭಜನಾ ಸತ್ಸಂಗ ಕಾರ್ಯಕ್ರಮ ನಡೆದು ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.