75ನೇ ಸ್ವಾತಂತ್ರೋತ್ಸವ ಕಾರ್ಯಕ್ರಮವು ಪಂಜದ ವನಿತಾ ಸಮಾಜ ವತಿಯಿಂದ ಆ.15 ರಂದು ನಡೆಯಿತು. ಧ್ವಜಾರೋಹಣವನ್ನು ನೂತನ ಧ್ವಜಸ್ತಂಭದ ನಿರ್ಮಾಣಕ್ಕೆ ದಾನಿಗಳಾದ ಶ್ರೀಮತಿ ಲೀಲಾವತಿ ಮತ್ತು ಬಾಲಕೃಷ್ಣ ನೇರಳ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪಾ ಡಿ ಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ ಭಾಗವಹಿಸಿದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷೆ ಶ್ರೀಮತಿ ಹೇಮಾವತಿ ಜನಾರ್ಧನ ಉಪಸ್ಥಿತರಿದ್ದರು.
ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ.ಮಂಜುನಾಥ, ಅಲ್ಲಿಯ 60 ಜನ ಸಿಬ್ಬಂದಿಗಳು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು,ಅಂಗನವಾಡಿ ಮಕ್ಕಳು, ಮಕ್ಕಳ ಪೋಷಕರು, ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಪೂರ್ಣಿಮಾ ಜಾಕೆ ಶ್ರೀಮತಿ ರತ್ನಾವತಿ ಬೊಳ್ಳಾಜೆ, ಶ್ರೀಮತಿ ಚಿತ್ರಕಲಾ ಬೊಳ್ಳಾಜೆ ಪ್ರಾರ್ಥಿಸಿ, ಕಾರ್ಯದರ್ಶಿ ಭಾಗೀರಥಿ ಕರಿಕ್ಕಳ ವಂದಿಸಿದರು. ಶ್ರೀಮತಿ ತುಳಸಿ ದಯಾಪ್ರಸಾದ್ ನಿರೂಪಿಸಿದರು.