ಅಜ್ಜಾವರ ಗ್ರಾಮದ ಮೇನಾಲದಲ್ಲಿ ದರ್ಗಾ ಸಮೀಪವಿರುವ ವಿವಾದಿತ ಜಾಗದಲ್ಲಿ ಮೇನಾಲದ ಕೃಷ್ಣಾಷ್ಟಮಿ ಸಮಿತಿಯವರು ವಾಹನ ಪಾರ್ಕಿಂಗ್ ಗಾಗಿ
ಜೆಸಿಬಿಯಲ್ಲಿ ನೆಲ ಸಮತಟ್ಟು ಮಾಡಿದ ವಿಚಾರವಾಗಿ ದರ್ಗಾದವರ ಆಕ್ಷೇಪಕ್ಕೆ ಕಾರಣವಾಗಿ ವಿವಾದ ಕೇಂದ್ರವಾಗಿದ್ದು, ಪೋಲೀಸರು ಹಾಗೂ ಕಂದಾಯ ಇಲಾಖೆಯರು
ಸ್ಥಳಕ್ಕೆ ಆಗಮಿಸಿ ಈ ಜಾಗದ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿರುವ ಘಟನೆ ಇಂದು ನಡೆದಿದೆ.