ಬೆಳ್ಳಾರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆಯು ಆ.18 ರಂದು ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ರವರು ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಅಭಿವೃದ್ಧಿ ಬಗ್ಗೆ ಮತ್ತು ಮಹಾಸಭೆ ನಡೆಸುವ ಬಗ್ಗೆ ಚರ್ಚೆ ಹಾಗೂ ಸೆ.20 ರಂದು ಸಂಘದ ಮಹಾಸಭೆ ನಡೆಸುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಅಬ್ದುಲ್ ರಹಮಾನ್, ನಿರ್ದೇಶಕ ಶ್ರೀರಾಮ ಪಾಟಾಜೆ, ವಿಠಲದಾಸ್ ಎನ್.ಎಸ್.ಡಿ, ರಮೇಶ ಮಾರ್ಲ ಹಾಗೂ ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ರೈ ಸ್ವಾಗತಿಸಿ, ವಂದಿಸಿದರು.