ನಮ್ಮ ಬೇಡಿಕೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ ಹಾಗೂ ಕಳೆದ ಮೂರು ತಿಂಗಳುಗಳಿಂದ ವೇತನ ನೀಡದೇ ಸರಕಾರ ನಮ್ಮನ್ನು ಸತಾಯಿಸುತ್ತಿದೆ ಎಂದು ಆರೋಪಿಸಿ ಅಕ್ಷರ ದಾಸೋಹ ನೌಕರರು ಇಂದು ತಾ.ಪಂ.ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯ ನೇತೃತ್ವ ವಹಿಸಿದ್ದ ಸಿಐಟಿಯು ಸಂಘಟನೆಯ ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ, ತಾಲೂಕು ಅಧ್ಯಕ್ಷ ರಾಬರ್ಟ್ ಡಿ,ಸೋಜ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲೀಲಾವತಿ ಅಲೆಕ್ಕಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾವತಿ ಸೂರ್ತಿಲ, ತಾಲೂಕು ಸಮಿತಿಯ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಐವರ್ನಾಡು, ಸವಿತ ಎಲಿಮಲೆ, ಭವ್ಯ ಎಡಮಂಗಲ, ಲತಾ ಪದವು, ಕುಸುಮಾ, ಸಾವಿತ್ರಿ, ಖಜಾಂಜಿ ಪುಷ್ಪ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.