ಹಾಲುತ್ಪಾದಕರ ಮಹಿಳಾ ಸಹಕಾರಿ ಸಂಘ(ನಿ.) ಸುಬ್ರಹ್ಮಣ್ಯ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.16 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಶೋಭಾ ನಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗತ ವರ್ಷದಲ್ಲಿ ಸಂಘವು 2,08,002.72 ರೂ ನಿವ್ವಳ ಲಾಭವನ್ನು ಪಡೆದಿರುತ್ತದೆ. ಪ್ರತೀ ಹಾಲುತ್ಪಾದಕರಿಗೆ ಲೀಟರ್ ಗೆ 1.32 ಪೈಸೆ ಬೋನಸ್ ಕೊಡುವುದೆಂದು ಮತ್ತು ಎಲ್ಲಾ ಹಾಲುತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನವನ್ನು ಸಂಘದ ಕಡೆಯಿಂದ ವಿತರಿಸಲಾಯಿತು.
ಪ್ರಥಮ ಬಹುಮಾನವನ್ನು ರಾಧಿಕಾ ರವೀಂದ್ರ ರುದ್ರಪಾದ ಅವರು ಪಡೆದುಕೊಂಡರು. ರಾಧಿಕಾ ರವೀಂದ್ರ ರುದ್ರಪಾದ ಅವರ ಪರವಾಗಿ ಅವರ ಪತಿ ರವೀಂದ್ರ ಕುಮಾರ್ ರುದ್ರಪಾದ ಅವರು ಬಹುಮಾನವನ್ನು ಸ್ವೀಕರಿಸಿದರು. ದ್ವಿತೀಯ ಬಹುಮಾನವನ್ನು ಪ್ರೇಮಾ.ಬಿ ಹಾಗೂ ತೃತೀಯ ಬಹುಮಾನವನ್ನು ಸೀತಮ್ಮ ಇವರುಗಳು ಪಡೆದುಕೊಂಡರು. ಸಂಘದಿಂದ 12% ಡಿವಿಡೆಂಡ್ ಅನ್ನು ಕೊಡುವುದೆಂದು ತೀರ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಪುಷ್ಪ ರವರು ವಾರ್ಷಿಕ ವರದಿಯನ್ನು ವಾಚಿಸಿದರು.
ಶ್ರೀಮತಿ ಸುಭಾಷಿಣಿ ಶಿವರಾಂ ಅವರು ಪ್ರಾರ್ಥಿಸಿ, ಕಾರ್ಯದರ್ಶಿ ಪುಷ್ಪ ರವರು ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಸಭೆಯ ನಂತರ ಭೋಜನ ವಿತರಿಸಲಾಯಿತು.
ವರದಿ :- ಉಲ್ಲಾಸ್ ಕಜ್ಜೋಡಿ