ರೋಟರಿ ಕ್ಲಬ್ ಸುಳ್ಯ, ರೋಟರಿ ಸಿಟಿ ಸುಳ್ಯ, ಇನ್ನರ್ ವ್ಹೀಲ್ ಕ್ಲಬ್, ರೋಟಾರಾಕ್ಟ್ ಸುಳ್ಯ ,ಭಾರತಿಯ ರೆಡ್ ಕ್ರಾಸ್ ಸಂಸ್ಥೆ, ಎನ್ ಎಸ್ಸ್ ಎಸ್ಸ್ ಘಟಕ ಮತ್ತು ರೆಡ್ ರಿಬ್ಬನ್ ಎನ್ ಎಂ ಸಿ ಸುಳ್ಯ, ವತಿಯಿಂದ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ವಿ ಜಿ ಆಯುರ್ವೇದ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ರೋ . ಲೀಲಾಧರ್ ಡಿ ವಿ ನಡೆಸಿ ರಕ್ತದಾನ ಶ್ರೇಷ್ಠ ದಾನವಾಗಿದ್ದು ಯುವಕರು ಈ ನಿಟ್ಟನಲ್ಲಿ ಮುಂದೆ ಬಂದು ರಕ್ತದಾನ ಮಾಡಿ ಜೀವವುಳಿಸುವ ಕಾರ್ಯದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ರಕ್ತದಾನದ ಪ್ರಾಮುಖ್ಯತೆಯ ಬಗ್ಗೆ ಪುತ್ತೂರು ಕ್ಯಾಂಪ್ಕೊ ಬ್ಲಡ್ ಸೆಂಟರ್ ಇದರ ನಿರ್ದೇಶಕರಾದ ಢಾ ರಾಮಚಂದ್ರ ಭಟ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕದ ಸಭಾಪತಿ ಶ್ರೀ ಸುಧಾಕರ ರೈ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ರೋ ಚಂದ್ರಶೇಖರ ಪೇರಾಲು ಇವರು ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ರೋ. ಪ್ರೀತಂ ಡಿ ಕೆ ಇವರು ಉಪಸ್ಥಿತರಿದ್ದರು . ಎನ್ ಎಸ್ ಎಸ್ ಘಟಕದ ಅಧಿಕಾರಿಗಳಾದ ರೋ ಸಂಜೀವ ಕುದುಪಾಜೆ , ಶ್ರೀಮತಿ ಚಿತ್ರಲೇಖ ಕೆ ಎಸ್ ಮತ್ತು ರೋಟರಾಕ್ಟ್ ಅಧ್ಯಕ್ಷ ಪುವೆಂದ್ರನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ರೋಟರಿ ಸಿಟಿ ಸುಳ್ಯ ಅಧ್ಯಕ್ಷ ರೋ. ಮುರಳೀಧರ ರೈ ಎಲ್ಲರನ್ನು ಸ್ವಾಗತಿಸಿದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ಶ್ರೀಮತಿ ನಯನಾ ಹರಿಪ್ರಸಾದ್ ವಂದಿಸಿದರು. ಒಟ್ಟು 53 ಮಂದಿ ರಕ್ತದಾನ ಮಾಡಿದ್ದು ಅದರಲ್ಲಿ 22 ಜನ ಪ್ರಥಮ ಬಾರಿ ರಕ್ತದಾನ ಮಾಡಿದರು . ಪ್ರಥಮ ರಕ್ತದಾನ ಮಾಡಿದ ಎಲ್ಲರಿಗೂ ಗೌರವಾರ್ಪಣೆ ಸಲ್ಲಿಸಲಾಯಿತು.