ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕ ದಲ್ಲಿ ಆ.15 ರಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ನಿವೃತ್ತ ಯೋಧರಾದ ಶ್ರೀಧರ.ಎಸ್.ಪಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ಸಭಾ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನೇಮಿಚಂದ್ರ ದೋಣಿಪಳ್ಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರಾದ ಶ್ರೀಧರ ಎಸ್.ಪಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ, ನಿವೃತ್ತ ಉಪನ್ಯಾಸಕರಾದ ಶ್ರೀಧರ ಭಾಗವತ್ ಕಜ್ಜೋಡಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸೌಮ್ಯ ಕಿರಿಭಾಗ, ಶಾಲಾ ಮುಖ್ಯೋಪಾಧ್ಯಾಯರಾದ ದೇವಕಿ ನೆತ್ತಾರ, ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆ, ಸಚಿನ್ ಕ್ರಿಕೆಟರ್ಸ್ ನ ಪ್ರಿಯ ಕಲ್ಲೇಮಠ, ಆರೋಗ್ಯ ಇಲಾಖೆಯ ಸಿಬ್ಬಂದಿ ಮೋಹಿನಿ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇಶಭಕ್ತಿ ಗೀತೆ ಕಾರ್ಯಕ್ರಮಗಳು ನಡೆದು, ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಶ್ರೀಧರ.ಎಸ್.ಪಿ, ನಿವೃತ್ತ ಉಪನ್ಯಾಸಕರಾದ ಶ್ರೀಧರ ಭಾಗವತ್ ಕಜ್ಜೋಡಿ, ಸಚಿನ್ ಕ್ರಿಕೆಟರ್ಸ್ ಹರಿಹರ, ಆರೋಗ್ಯ ಇಲಾಖೆಯ ಸಿಬ್ಬಂದಿ ಮೋಹಿನಿ ಅವರುಗಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಪೋಷಕರು, ವಿದ್ಯಾಭಿಮಾನಿಗಳು, ಸಚಿನ್ ಕ್ರಿಕೆಟರ್ಸ್ ಹರಿಹರ ಇದರ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಗೆ ದಾನಿಗಳು ಕೊಡುಗೆಗಳನ್ನು ನೀಡಿದ್ದು, ನಿವೃತ್ತ ಉಪನ್ಯಾಸಕರಾದ ಶ್ರೀಧರ ಭಾಗವತ್ ಕಜ್ಜೋಡಿ ಅವರು ಡಯಾಸ್ ಅನ್ನು ಕೊಡುಗೆಯಾಗಿ ನೀಡಿದರು, ನಿವೃತ್ತ ಸೈನಿಕರು ಹಾಗೂ ಸಬ್ ಇನ್ಸ್ಪೆಕ್ಟರ್ ಆದ ನವೀನ್ ಕೋಟ್ಯಾನ್ ಅವರು ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಿದರು, ಸತೀಶ್ ಮುಳ್ಳುಬಾಗಿಲು ಹಾಗೂ ತಂಡದ ಸದಸ್ಯರು ಪ್ರೊಜೆಕ್ಟರ್ ಅನ್ನು ಕೊಡುಗೆಯಾಗಿ ನೀಡಿದರು, ಸಚಿನ್ ಕ್ರಿಕೆಟರ್ಸ್ ಹರಿಹರ ಇವರು ಪುಸ್ತಕ ಗೂಡು ಅನ್ನು ಕೊಡುಗೆಯಾಗಿ ನೀಡಿದರು, ನಿವೃತ್ತ ಯೋಧರಾದ ಶ್ರೀಧರ.ಎಸ್.ಪಿ ಅವರು ಪುಸ್ತಕ ಗೂಡಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು, ಶಿವಾಜಿ ಮಾರುತಿ ಸುರುವೆ(ದುರ್ಗಾಲಕ್ಷ್ಮಿ ಜ್ಯುವೆಲ್ಲರ್ಸ್ ಪುತ್ತೂರು) ಇವರು ಲ್ಯಾಪ್ ಟಾಪ್ ಅನ್ನು ಕೊಡುಗೆಯಾಗಿ ನೀಡಿದರು, ನಿವೃತ್ತ ಲೋಕೋಪಯೋಗಿ ಅಭಿಯಂತರರಾದ ಗಿರೀಶ್ ಕೊರಂಬಟ ಅವರು ಕಪಾಟುಗಳನ್ನು ಹಾಗೂ ಮೈಕ್ ಸೆಟ್ ಅನ್ನು ಕೊಡುಗೆಯಾಗಿ ನೀಡಿದರು, ವಿದ್ಯಾರ್ಥಿಗಳ ಪೋಷಕರು ಹಾಗೂ ಊರಿನ ವಿಧ್ಯಾಭಿಮಾನಿಗಳು ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಿದರು, ಉಲ್ಲಾಸ್ ಕಜ್ಜೋಡಿ ಅವರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪ್ರಾಯೋಜಿಸಿದರು.
ದಾನಿಗಳಿಗೆ ಮುಖ್ಯೋಪಾಧ್ಯಾಯರಾದ ದೇವಕಿ ನೆತ್ತಾರ ಅವರು ಶಾಲು ಹೊದಿಸಿ ಗೌರವಿಸಿದರು.
ಅದೇ ರೀತಿ ಯುವ ಉದ್ಯಮಿ ರಾಜೇಶ್ ಕಿರಿಭಾಗ, ರಾಮಕೃಷ್ಣ ಹೋಟೆಲ್, ಸಚಿನ್ ಕ್ರಿಕೆಟರ್ಸ್ ಹರಿಹರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ದುರ್ಗಾಲಕ್ಷ್ಮಿ ಜ್ಯುವೆಲ್ಲರ್ಸ್ ಪುತ್ತೂರು, ಗ್ರಾಮ ಪಂಚಾಯತ್ ಹರಿಹರ ಪಲ್ಲತ್ತಡ್ಕ ಇವರುಗಳ ವತಿಯಿಂದ ಸಿಹಿ ತಿಂಡಿ ವಿತರಣೆ ನಡೆಯಿತು.
ಮುಖ್ಯ ಶಿಕ್ಷಕರಾದ ದೇವಕಿ ನೆತ್ತಾರ ಅವರು ಸ್ವಾಗತಿಸಿ, ಸಹ ಶಿಕ್ಷಕರಾದ ಶರಣಪ್ಪ ದೋಣಿ ಅವರು ವಂದಿಸಿದರು. ಸಹ ಶಿಕ್ಷಕರಾದ ಜಶ್ಮಿ, ಅಶ್ಮಿತಾ, ಉಮಾಶ್ರೀ ಸಹಕರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ