Ad Widget

ಗುತ್ತಿಗಾರು : ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ – ಮಹಿಳಾ ಸಾಧಕಿಯರಿಗೆ ಸನ್ಮಾನ.

ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ ಆ. 15 ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಆಚಳ್ಳಿ ಧ್ವಜಾರೋಹಣ ನೆರವೇರಿಸಿದರು.

. . . . . .

ತದನಂತರ ಸಂಜೀವಿನಿ ಒಕ್ಕೂಟದ ಮಹಿಳೆಯರು ಹಾಗೂ ಗ್ರಾಮದ ಮಾತಾ ಭಗಿನಿಯರು ಜಯಘೋಷಗಳೊಂದಿಗೆ ವಿವಿಧ ವೇಷಭೂಷಣಗಳಲ್ಲಿ ಟಾಬ್ಲೊ ಹಾಗೂ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ನೊಂದಿಗೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಲತಾಕುಮಾರಿ ಅಜಡ್ಕ ಹಾಗೂ ಅಭಿಲಾಷ ರವರ ಘೋಷವಾಕ್ಯಗಳೊಂದಿಗೆ ಮೆರವಣಿಗೆಯು ಗುತ್ತಿಗಾರಿನ ಮುಖ್ಯ ಪೇಟೆಯಲ್ಲಿ ಸಾಗಿ ಬಂದಿತು.

ಪಂಚಾಯತ್ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ 9 ಮಂದಿ ಸಾಧಕೀಯರನ್ನು ಸನ್ಮಾನಿಸಲಾಯಿತು. ಹಾಗೂ ಧ್ವಜ ಹೊಲಿದ 15 ಜನ ಸದಸ್ಯರ ತಂಡವನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ, ತಾಲೂಕಿನ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶ್ವೇತಾ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮತ, ಜಗದೀಶ್ ಬಾಕಿಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಧನಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

9 ಜನ ಮಹಿಳಾ ಸಾಧಕಿಯರಾದ ಶ್ರೀಮತಿ ಅನಿತಾ ಮಹೇಶ್(ದೇಶಸೇವೆ, ಪೈಕಶ್ರೀ ಸಂಜೀವಿನಿ ಸದಸ್ಯೆ), ಲತಾ ಅಂಬೆಕಲ್ಲು(ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಶಿಕ್ಷಕಿ, ಪಂಚಶ್ರೀ ಸ್ತ್ರೀ ಶಕ್ತಿ ಬಳ್ಳಕ ಸದಸ್ಯೆ), ಶ್ರೀಮತಿ ಲೀಲಾವತಿ(ಕಮ್ಮಾರಿಕೆ ಕಸುಬು, ಸಿದ್ದಿಧಾತ್ರಿ ಸಂಘದ ಸದಸ್ಯೆಯ ತಾಯಿ), ಶ್ರೀಮತಿ ಕಾವೇರಿ ಭರತ್(ವಿಕಲಚೇತನರ ಸೇವಾ ಕಾರ್ಯಕರ್ತೆ, ನಿಸರ್ಗ ಸಂಜೀವಿನಿ ಸದಸ್ಯೆ), ನೆಬಿಸಾ(ಗ್ರಾಮೀಣ ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಿ ಮಾದರಿಯಾದ ಮಹಿಳೆ, ಸಿದ್ದಿಧಾತ್ರಿ ಸಂಜೀವಿನಿ ಸದಸ್ಯೆ), ಪ್ರೇಮಾ(ಆರೋಗ್ಯ ಸೇವಾ ಸಿಬ್ಬಂದಿ,ಭಾಗ್ಯಲಕ್ಷ್ಮಿ ಸಂಜೀವಿನಿ ಸದಸ್ಯೆ) ಹಾಗೂ ಘನತ್ಯಾಜ್ಯ ಘಟಕದ ಹಸಿರು ಸಂಜೀವಿನಿ ಸದಸ್ಯೆಯರಾದ ಶ್ರೀಮತಿ ರಮಿತಾ, ಶ್ರೀಮತಿ ವಸಂತಿ, ಶ್ರೀಮತಿ ರತ್ನಾವತಿ ಇವರುಗಳನ್ನು ಎಲ್ಲಾ ಅತಿಥಿಗಳು ಸೇರಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಮಹಿಳಾ ಸಂಘದ ಸದಸ್ಯರು, ಪುರುಷರು, ಒಕ್ಕೂಟದ ಪದಾಧಿಕಾರಿಗಳು, ಎಂಬಿಕೆ ಮಿತ್ರಕುಮಾರಿ ಚಿಕ್ಮುಳಿ ಹಾಗೂ ಎಲ್ಸಿಆರ್ಪಿಗಳಾದ ದಿವ್ಯ ಚತ್ರಪ್ಪಾಡಿ ಮತ್ತು ಶಾರದ ನಡುಗಲ್ಲು ಹಾಜರಿದ್ದರು.

ಈ ಮೆರವಣಿಗೆ ಕಾರ್ಯಕ್ರಮವು ವಿಪತ್ತು ನಿರ್ವಹಣಾ ತಂಡದ ಸದಸ್ಯರ ನೇತೃತ್ವದಲ್ಲಿ ನಡೆಯಿತು. ಪ್ರಾರ್ಥನೆಯನ್ನು ದಿವ್ಯ ಚತ್ರಪ್ಪಾಡಿ, ಸವಿತಾ ಕುಳ್ಳಂಪಾಡಿ ಬಳಗದವರು ನೆರವೇರಿಸಿದರು. ಶ್ರೀಮತಿ ರವಿಕಲಾ ಚೆಮ್ನೂರು ಸ್ವಾಗತಿಸಿ, ಅಮರ ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷರಾದ ಸವಿತಾ ಕುಳ್ಳಂಪಾಡಿ ವಂದಿಸಿದರು.

ಅಮರ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಯಮಿತಾ ಪೂರ್ಣಚಂದ್ರ ಪೈಕ ಹಾಗೂ ಗ್ರಂಥಪಾಲಕಿ ಶ್ರೀಮತಿ ಅಭಿಲಾಷ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!