- Wednesday
- December 4th, 2024
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ವತಿಯಿಂದ ನಡೆಯುವ ಮೊಸರು ಕುಡಿಕೆ ಉತ್ಸವ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. 9ನೇ ವರುಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಹರೀಶ್ ರೈ ಉಬರಡ್ಕ, ಉಪಾಧ್ಯಕ್ಷರಾಗಿ. ಪುರುಷೋತ್ತಮ ಕಿರ್ಲಾಯ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಯಾದವ್, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕೋಶಾಧಿಕಾರಿಯಾಗಿ ರಂಜಿತ್ ಸುಳ್ಯ,...
ಬಳ್ಳ ಗ್ರಾಮದ ಪಾದೆಯಲ್ಲಿ 21 ನೇ ವರುಷದ ಶ್ರೀ ಗಣೇಶೋತ್ಸವದ ಸಮಿತಿ ರಚನೆ ಗೊಂಡಿತ್ತು.ಅಧ್ಯಕ್ಷರಾಗಿ ಸತ್ಯನಾರಾಯಣ ಕುಜಗುರಿ, ಕಾರ್ಯದರ್ಶಿ ಯಾಗಿ ಶಿವಪ್ರಸಾದ್ , ಖಜಾಂಚಿ ರಾಮಕೃಷ್ಣ ಪಡ್ಯೊಟ್ಟು ಆಯ್ಕೆಯಾದರು. ಸ್ಥಾಪಕಾಧ್ಯಕ್ಷ ನಾರಾಯಣ ಆಚಾರ್ಯ ನರಿಯಂಗ ಉಪಸ್ಥಿತರಿದ್ದರು.
ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶೋತ್ಸವದ ಬಗ್ಗೆ ಆಗಸ್ಟ್ 7ರಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವಿಪ್ರಸಾದ್, ರಾಮಕೃಷ್ಣ ರೈ ಮಾಲೆಂಗ್ರಿ, ಗಿರೀಶ್ ನಡುಬೈಲು, ರವೀಂದ್ರ ದೇರಳ, ಪ್ರಿಯಾಂಕ ಪುಳಿಕುಕ್ಕು, ಪ್ರಧಾನ ಅರ್ಚಕರಾದ ಸೀತಾರಾಮಯ್ಯ ನೂಚಿಲ, ಶ್ಯಾಮ್ ಕಿಶೋರ್ ಕೇಂಜೂರು, ಸಿಬ್ಬಂದಿ ರವೀಂದ್ರ ಮಾಲೆಂಗಿರಿ ಉಪಸ್ಥಿತರಿದ್ದರು....
ಪಾಲೆಪ್ಪಾಡಿಯ ಮಂಜುಶ್ರೀ ಗೆಳೆಯರ ಬಳಗ ಮತ್ತು ಸಾರ್ವಜನಿಕ ಗಣೇಶೋತ್ಸವ ವತಿಯಿಂದ ಆ.31 ರಂದುನಡೆಯುವ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಸಮಿತಿಯನ್ನು ರಚಿಸಲಾಯಿತು. 2022-2023 ರ ಸಾರ್ವಜನಿಕ ಗಣೇಶೋತ್ಸವ ಅಧ್ಯಕ್ಷರಾಗಿ ಸುಂದರಲಿಂಗಂ ಸಿ ಕೂಪ್ ಮತ್ತು ಕಾರ್ಯದರ್ಶಿಯಾಗಿ ಜಯಪ್ರಸಾದ್ ಕಜೆತ್ತಡ್ಕ, ಹಾಗೂ ವಿಶ್ವನಾಥ್ ಕಟ್ಟತಾರು ಸಮಿತಿಯ ಉಪಾಧ್ಯಕ್ಷರಾಗಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಅಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ 75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಉಡುಪಿ ಜಿಲ್ಲೆ ವತಿಯಿಂದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ , ಅಜ್ಜರಕಾಡು, ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶ ನೀಡಿದರು....
ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ಕರುಣಾಕರ ಮಡ್ತಿಲರವರು ಸೇವಾ ನಿವೃತ್ತಿ ಹೊಂದಿದ್ದ ಪ್ರಯುಕ್ತ ಆ.14 ರಂದು ಐವರ್ನಾಡಿನ ಪಲ್ಲತಡ್ಕ ಕಾಂಪ್ಲೆಕ್ಸ್ ನಲ್ಲಿ ಅಭಿನಂದನೆ ಮತ್ತು ಸತ್ಕಾರ ಕೂಟ ನಡೆಯಿತು.ಈ ಸಂದರ್ಭದಲ್ಲಿ ಕರುಣಾಕರ ಮಡ್ತಿಲ ಮತ್ತು ಶ್ರೀಮತಿ ಸವಿತಾ ದಂಪತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದಿನೇಶ ಮಡ್ತಿಲ ಹಾಗೂ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡರು ಮಾತನಾಡಿ ಕರುಣಾಕರ...
ಸುಳ್ಯದ ಬೀರಮಂಗಲ ಗೆಳೆಯರ ಬಳಗ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಯತೀಶ್ ಕುಮಾರ್ ಬೀರಮಂಗಲ ನೆರವೇರಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆ, ನಿವೃತ್ತ ಎಎಸೈ ಭಾಸ್ಕರ್, ಕೇಶವ ಬಂಗ್ಲೆಗುಡ್ಡೆ, ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಗಣಪತಿ, ಪುರುಷೋತ್ತಮ, ಗುರುಸ್ವಾಮಿ ರಾಮ್ ಮೋಹನ್ ಸೆಣೈ...
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಲಾಮಾಯೆ (ರಿ ) ಏನೆಕಲ್ ಸಂಸ್ಥೆಯ" ಡ್ಯಾನ್ಸ್ ಒನ್ ಟು ತ್ರಿ " ವಿದ್ಯಾರ್ಥಿಗಳಿಂದ "ಅಮೃತ ವೇದಿಕೆ" ಪ್ರತಿಭಾ ಪ್ರದರ್ಶನ -2022 ಕಾರ್ಯಕ್ರಮ ಆ.14 ರಂದು ಶ್ರೀ ಆದಿಶಕ್ತಿ ಭಜನಾ ಮಂದಿರ ಬಾಲಾಡಿ ಇಲ್ಲಿ ನಡೆಯಿತು.ಬಾಲಾಡಿ ಭಜನಾ ಮಂದಿರದ ಅಧ್ಯಕ್ಷರಾದ ಗಿರಿಯಪ್ಪ ಗೌಡ ಬಾಲಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಜಿ...
ನಿಂತಿಕಲ್ ಪೇಟೆಯ ವರ್ತಕರು ಮತ್ತು ರಿಕ್ಷಾ ಚಾಲಕ ಮಾಲಕರು ಹಾಗು ಸಾರ್ವಜನಿಕರು ನಿಂತಿಕಲ್ ಧರ್ಮಶ್ರೀ ಆರ್ಕೇಡ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಿದರು.ಧ್ವಜಾರೋಹಣವನ್ನು ಕೋಟಿ ಚೆನ್ನಯ ಆದಿ ಬೈದರ್ಕಳ ಗರಡಿ ಎಣ್ಮೂರಿನ ಅನುವಂಶಿಕ ಆಡಳಿತ ಮೊಕ್ತೇಸರ ಕಟ್ಟಬೀಡು ರಾಮಕೃಷ್ಣ ರೈ ನೆರವೇರಿಸಿ ಶುಭ ಹಾರೈಸಿದರು .ಮುಖ್ಯ ಅತಿಥಿ ಗಳಾಗಿ ನಿವೃತ್ತ ಅಧ್ಯಾಪಕ, ವೃದ್ಧಿ...
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಆ.15 ರಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ ಕಡ್ತಲ್ ಕಜೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶುಭಲತಾ ಕಟ್ಟ, ಶಿವಮ್ಮ ಕಟ್ಟ, ಪುಷ್ಪರಾಜ್...
Loading posts...
All posts loaded
No more posts