
ನಿಂತಿಕಲ್ ಪೇಟೆಯ ವರ್ತಕರು ಮತ್ತು ರಿಕ್ಷಾ ಚಾಲಕ ಮಾಲಕರು ಹಾಗು ಸಾರ್ವಜನಿಕರು ನಿಂತಿಕಲ್ ಧರ್ಮಶ್ರೀ ಆರ್ಕೇಡ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಿದರು.ಧ್ವಜಾರೋಹಣವನ್ನು ಕೋಟಿ ಚೆನ್ನಯ ಆದಿ ಬೈದರ್ಕಳ ಗರಡಿ ಎಣ್ಮೂರಿನ ಅನುವಂಶಿಕ ಆಡಳಿತ ಮೊಕ್ತೇಸರ ಕಟ್ಟಬೀಡು ರಾಮಕೃಷ್ಣ ರೈ ನೆರವೇರಿಸಿ ಶುಭ ಹಾರೈಸಿದರು .ಮುಖ್ಯ ಅತಿಥಿ ಗಳಾಗಿ ನಿವೃತ್ತ ಅಧ್ಯಾಪಕ, ವೃದ್ಧಿ ಕಾಂಪ್ಲೆಕ್ಸ್ ಮಾಲಕ ವೆಂಕಪ್ಪ ಗೌಡ ಆಲಾಜೆ ಮಾಜಿ ತಾಲೂಕು ಪಂ.ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ ಹಾಗೂ ಸೀತಾರಾಮಾಂಜನೇಯ ಭಜನಾ ಮಂದಿರ ಎಣ್ಮೂರು ಇದರ ಅಧ್ಯಕ್ಷರಾದ ಕೆ ಎನ್ ರಘುನಾಥ ರೈ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧರ್ಮಶ್ರೀ ಆರ್ಕೇಡ್ ನ ಮಾಲಕ ದೀಕ್ಷಿತ್ ಗೌಡ ಕಾಮಧೇನು ಉಪಸ್ಥಿತರಿದ್ದರು.ಡಿಂಪಲ್ ಡಿಜಿಟಲ್ ಸೇವಾ ಕೇಂದ್ರದ ಮಾಲಕ ಎನ್ ಟಿ ವಸಂತ ಸ್ವಾಗತಿಸಿ, ನಿರೂಪಿಸಿದರು. ದೀಕ್ಷಿತ್ ಗೌಡ ಕಾಮಧೇನು ವಂದಿಸಿದರು.