Ad Widget

ಜಾಲ್ಸೂರು: ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ಜಾಲ್ಲೂರು ಘಟಕದ ವತಿಯಿಂದ ಆಟಿ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

. . . . . . . . .

ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ಜಾಲ್ಲೂರು ಘಟಕದ ವತಿಯಿಂದ ಆಟಿ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆ.12ರಂದು ಜಾಲ್ಲೂರು ಗ್ರಾ.ಪಂ. ಸಭಾಭವನದಲ್ಲಿ ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಬಾಪೂ ಸಾಹೇಬ್ ಅವರ ಮೂಲಕ ದೀಪಬೆಳಗಿಸಿ ಉದ್ಘಾಟಿಸಲಾಯಿತು.

. . . . . . .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಯಸ್ವಿನಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಜಾಕೆ ಸದಾನಂದ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಶಿಕ್ಷಕ ಕೇಪು ಸುಂದರ ಮಾಸ್ತರ್ ದಂಪತಿಗಳನ್ನು ಹಾಗೂ ಜಾಲ್ಲೂರಿನ ಮೆಸ್ಕಾಂ ಲೈನ್ ಮೆನ್ ಸಿಬ್ಬಂದಿಗಳಾದ ತಿಮ್ಮಪ್ಪ, ಸಿದ್ದು, ಈರಯ್ಯ ಹಾಗೂ ಇತ್ತೀಚೆಗೆ ಹರಿಹರ ಪಲ್ಲತ್ತಡ್ಕದಲ್ಲಿ ಜೀವದ ಹಂಗು ತೊರೆದು ಹರಿಯುವ ನೀರಿನಲ್ಲಿ ಕ್ರೇನ್ ಚಾಲಕನ ಜೀವರಕ್ಷಿಸಿದ ಸೋಮಶೇಖರ ಕಟ್ಟೆಮನೆ ಕೂಜುಗೋಡು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದಾಮೋದರ ಗೌಡ, ಮುಖ್ಯ ಅತಿಥಿಯಾಗಿ ಕ್ಷೇತ್ರ ಸಮನ್ಮಯಾಧಿಕಾರಿ ಚಂದ್ರಶೇಖರ ಪೇರಾಲು ಮಾತನಾಡಿದರು.

ವೇದಿಕೆಯಲ್ಲಿ ಜಾಲ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ತಾಲೂಕು ಕಾರ್ಯದರ್ಶಿ ರಾಮಚಂದ್ರ, ಖಜಾಂಜಿ ಚಂದ್ರಹಾಸ ಅವರು ಉಪಸ್ಥಿತರಿದ್ದರು.

ತಾಲೂಕು ಕಾರ್ಯದರ್ಶಿ ರಾಮಚಂದ್ರ ವಂದಿಸಿ, ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಸಂಯೋಜಕರಾದ ಚೆನ್ನಕೇಶವ ಜಾಲ್ಲೂರು ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading