Ad Widget

ದೇಶಭಕ್ತಿ ಗೀತೆ ಗಾಯನ ಅಭಿಯಾನದ ಸಮಾರೋಪ ಮತ್ತು ಸನ್ಮಾನ ಸಮಾರಂಭ

ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಇವರ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ ವಿವಿಧ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ದೇಶಭಕ್ತಿ ಗೀತೆ ಗಾಯನ ಅಭಿಯಾನದ ಸಮಾರೋಪ ಮತ್ತು ಸನ್ಮಾನ ಸಮಾರಂಭ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯಿತು.

. . . . . . .

ಸಮಾರಂಭದ ಅಧ್ಯಕ್ಷತೆಯನ್ನು  ವಹಿಸಿದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು  ಮಾತನಾಡಿ ಸ್ವಾತಂತ್ರ್ಯದ ನಿಜವಾದ  ಅರ್ಥವನ್ನು ತಿಳಿದುಕೊಳ್ಳುವಲ್ಲಿ ನಾವಿಂದು ಸೋತಿದ್ದೇವೆ ಹಾಗೆಯೇ  ನಮ್ಮ ನಾಡು-ಸಂಸ್ಕೃತಿ-ಭಾಷೆಗಳ ಉಳಿವು ಈಗಿನ ವಿದ್ಯಾರ್ಥಿಗಳ ಕೈಯಲ್ಲಿದೆ.  ತಾಲೂಕಿನ 10 ವಿದ್ಯಾಲಯಗಳಲ್ಲಿ ದೇಶಭಕ್ತಿ ಗೀತೆಗಳ ಗಾಯನ   ಅಭಿಯಾನವನ್ನು ಹಮ್ಮಿಕೊಂಡದರ ಪ್ರತಿಫಲ ನಮ್ಮ ದೇಶ-ಭಾಷೆ-ಸಂಸ್ಕೃತಿ ಕಡೆಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಲು ನೆರವಾದರೆ ಇಂದಿನ ಈ ಶ್ರಮ ಸಾರ್ಥಕ ಎಂದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿಷ್ಣು ಭಟ್ ಕಾರ್ಯಕ್ರಮದ ಕುರಿತು ಮಾತನಾಡಿದರು.

ತಾಲೂಕಿನ 10 ವಿದ್ಯಾಲಯಗಳಲ್ಲಿ ನಡೆದ ದೇಶಭಕ್ತಿ ಗೀತೆ ಗಾಯನ ಅಭಿಯಾನದ ನೇತೃತ್ವ ವತಾಲೂಕಿನಹಿಸಿದ ಭಾವನಾ ಸುಗಮ ಸಂಗೀತ ಬಳಗದ ನಿರ್ದೇಶಕರಾದ ಕೆ.ಆರ್.ಗೋಪಾಲಕೃಷ್ಣ ಹಾಗೂ ಸಹ ಗಾಯಕಿಯರಾದ ಕುಮಾರಿ ಶುಭದಾ ಆರ್ ಪ್ರಕಾಶ್ ಮತ್ತು ಕುಮಾರಿ ಲಿಪಿ ಶ್ರೀ ಯವರನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಭಾವನಾ ಬಳಗದ ನಿರ್ದೇಶಕರಾದ ಕೆ.ಆರ್.ಗೋಪಾಲಕೃಷ್ಣ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ,ಕೋಶಾಧಿಕಾರಿ ದಯಾನಂದ ಆಳ್ವ ಸದಸ್ಯರಾದ ಯೋಗೀಶ್ ಹೊಸೊಳಿಕೆ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾಕುಮಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಲೀಲಾಧರ್ ಹಾಗೂ ಅಚ್ಚುತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಸಹ ಶಿಕ್ಷಕ ಸುಂದರ ವಂದಿಸಿ, ಶಿಕ್ಷಕ ವಸಂತ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!