
ಅರಂತೋಡು: ಎನ್ಎಸ್ಎಸ್ ಘಟಕದ ಹರ್ ಘರ್ ತಿರಂಗ್ ಅಭಿಯಾನ ಕಾರ್ಯಕ್ರಮ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜವನ್ನು ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಮೇಶ್ ತ್ರಿವರ್ಣ ಧ್ವಜ ವಿದ್ಯಾರ್ಥಿಗಳಿಗೆ ಹಸ್ತಾಂತರ ಮಾಡಿ, ಮಾತನಾಡಿ, ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ನಿಯಮಗಳನ್ನು ಅರಿತು , ಗೌರವದಿಂದ ಸರ್ಕಾರದ ಸೂಚನೆ ಪ್ರಕಾರ ತಮ್ಮ ತಮ್ಮ ಮನೆಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕೆಂದರು.ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಗೌರಿಶಂಕರ, ನಿಕಟಪೂರ್ವ ಕಾರ್ಯಕ್ರಮಾಧಿಕಾರಿ ಶ್ರೀ ಮೋಹನ್ ಚಂದ್ರ, ಹಿರಿಯ ಉಪನ್ಯಾಸಕರಾದ ಶ್ರೀ ಸುರೇಶ್ ವಾಗ್ಲೆ, ಮಾರ್ಗದರ್ಶನ ನೀಡಿದರು.ಶ್ರೀಮತಿ ಭಾಗ್ಯ ಶ್ರೀ, ಶ್ರೀಮತಿ ವಿದ್ಯಾ ಶಾಲಿ, ಶ್ರೀಮತಿ ಶಾಂತಿ, ಕುಮಾರಿ ನಯನ ಸಹಕರಿಸಿದರು.