ಸಂಪಾಜೆ ಗ್ರಾಮದಲ್ಲಿ ಭೂಕಂಪನ ಹಾಗೂ ಪ್ರವಾಹದಿಂದ ಆದಂತಹ ನಷ್ಟಕ್ಕೆ ಪರಿಹಾರ ದೊರಕದೆ ಇರುವ ವಿಚಾರದ ಕುರಿತು ಆ.11ರಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರಿಂದ ಪತ್ರಿಕಾಗೋಷ್ಟಿ ನಡೆಯಿತು.
ಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಪಾಜೆ ಗ್ರಾಮದಲ್ಲಿ ನೆರೆ ಹಾನಿಯಿಂದ ಭಾಗಷಃ ಹಾನಿಯಾಗಿದೆ. ಆದರೆ ಈವರೆಗೆ ಸರಕಾರದಿಂದ ಒಂದು ರೂಪಾಯಿಯ ಪರಿಹಾರವೂ ಲಭಿಸಿಲ್ಲ. ಉಸ್ತುವಾರಿ ಸಚಿವರ ಪತ್ತೆಯೇ ಇಲ್ಲ. ಒಟ್ಟು 45 ಕ್ಕೂ ಹೆಚ್ಚು ಮನೆಗಳು ಹಾಗೂ ಹಲವಾರು ಅಂಗಡಿ ಮುಂಗಟ್ಟು- ಕೃಷಿ ತೋಟಗಳು ತೀವ್ರ ಹಾನಿಗೊಳಗಾಗಿದೆ. ಮುಂದಿನ ದಿನಗಳಲ್ಲಿ ಪರಿಹಾರ ಸಿಗದೇ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೇಯೇ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸರ್ಕಾರಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಭೂಕಂಪನದ ವೇಳೆ ಮುಖ್ಯಮಂತ್ರಿಯೇ ಬಂದರೂ ಏನೂ ಪ್ರಯೋಜನವಾಗಿಲ್ಲ ಹಾಗೂ ಗಂಜಿ ಕೇಂದ್ರದಲ್ಲೂ ಸರಕಾರದಿಂದ ಸರಿಯಾದ ವ್ಯವಸ್ಥೆ ಆಗಿಲ್ಲ. ಅಲ್ಲದೇ ಸುಮಾರು 1೦ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದರು.
ಪಕ್ಷದಿಂದಲೇ ನಿವೃತ್ತಿಯಾಗುತ್ತೇನೆ- ಕೊಯಿಂಗಾಜೆ : ಸಂಪಾಜೆ
ಕಾಂಗ್ರೆಸ್ ಮುಖಂಡ ಮಹಮ್ಮದ್ ಕುಂಙಿ ಗೂನಡ್ಕ ಮಾತನಾಡಿ ನಮ್ಮ ಪಕ್ಷ ಸಂಪಾಜೆಯಲ್ಲಿ ಸಧೃಢವಾಗಿದೆ. ನಾವೆಲ್ಲರೂ ಸೋಮಶೇಖರ ಕೊಯಿಂಗಾಜೆ ಜೊತೆಗಿದ್ದೇವೆ ಎಂದರು.