75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಜು.09 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.
ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಿರಿಯ ವಿಭಾಗ, ಹಿರಿಯ ವಿಭಾಗ, ಪ್ರೌಢ ವಿಭಾಗ, ಕಾಲೇಜು ವಿಭಾಗಕ್ಕೆ ಗ್ರಂಥಾಲಯ ಪಿತಾಮಹ ಡಾ.ರಂಗನಾಥನ್ ಅವರ ಚಿತ್ರ ಬಿಡಿಸುವುದು, ಕಿರಿಯ ವಿಭಾಗ, ಹಿರಿಯ ವಿಭಾಗ ಹಾಗೂ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ದೇಶಭಕ್ತಿ ಗೀತೆ ಹಾಗೂ ಶಾಲಾ ಕಾಲೇಜು ಮಟ್ಟದಲ್ಲಿ ನೀಡಿರುವ ಭಾಷಣದ ವಿಷಯಕ್ಕೆ ಸಂಬಂಧಿಸಿದ ಭಾಷಣ ಸ್ಪರ್ಧೆ ನಡೆಯಿತು. ಕಾಲೇಜು ವಿಭಾಗಕ್ಕೆ ವಂದೇಮಾತರಂ ದೇಶಭಕ್ತಿ ಗೀತೆ, ಸ್ವಾತಂತ್ರ್ಯ ಹೋರಾಟಗಾರರ/ಹೋರಾಟಗಾರ್ತಿಯರ ಛದ್ಮವೇಷ ಹಾಗೂ ಗ್ರಂಥಾಲಯ ಸದ್ಬಳಕೆ ಬಗ್ಗೆ ಭಾಷಣ ಸ್ಪರ್ಧೆ ನಡೆಯಿತು. ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 150 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಗ್ರಂಥಾಲಯ ಸದುಪಯೋಗದ ಕುರಿತು ಉಪನ್ಯಾಸಕಿ ಸವಿತಾ ಕೂಜುಗೋಡು ಮತ್ತು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ ಮಾತನಾಡಿದರು. ಕಾರ್ಯಕ್ರಮದ ನಿರ್ದೇಶಕರಾದ ಯೋಗೀಶ್ ಹೊಸೊಳಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನಿರ್ದೇಶಕರು ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷಾ ಮೋಟ್ನೂರು ಕಾರ್ಯಕ್ರಮ ನಿರ್ವಹಣೆ ಮಾಡಲು ಸಹಕರಿಸಿ ಸರ್ವರಿಗೂ ಧನ್ಯವಾದ ಸಮರ್ಪಣೆ ಮಾಡಿದರು.
ಸ್ಪರ್ಧಾ ನಿರ್ಣಾಯಕರಾಗಿ ಕೃಷ್ಣ ಪ್ರಸಾದ್ ಕೋಲ್ಚಾರ್, ದಿವ್ಯಾ ಸುಜನ್ ಗುಡ್ಡೆಮನೆ, ಮಿತ್ರಕುಮಾರಿ ಚಿಕ್ಮುಳಿ, ದೀಕ್ಷಾ ಮಾಡಬಾಕಿಲ, ಕರುಣಾಕರ ಸಾಲ್ತಾಡಿ, ಗೀತಾಶ್ರೀ ಕೋಲ್ಚಾರ್, ಲೀಲಾವತಿ ಅಂಜೇರಿ, ಪ್ರಮೀಳಾ ಎರ್ಧಡ್ಕ, ಭಾರತಿ ಸಾಲ್ತಾಡಿ, ಶ್ರೀದೇವಿ ಕೊಂಬೊಟ್ಟು, ಗ್ರಾಮ ಪಂಚಾಯತ್ ಸದಸ್ಯರು, ಶಿಕ್ಷಕರು ಪೋಷಕರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ