
ಜಂತು ಹುಳು ನಿವಾರಣ ಅಂಗವಾಗಿ ಆ.10 ರಂದು ಸುಳ್ಯದ ಬೊಳುಬೈಲು ಪೀಸ್ ಸ್ಕೂಲ್ ನ ಮಕ್ಕಳಿಗೆ ಜಂತುಹುಳು ನಿವಾರಣೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಬೇಬಿ ವಿಶ್ವನಾಥ್ ಮಾಹಿತಿ ನೀಡಿದರು. ನಂತರ ಆರೋಗ್ಯ ಇಲಾಖೆ ವತಿಯಿಂದ ಮಾತ್ರೆಯನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಸೈಫುಲ್ಲಾ ಹಾಗೂ ಸ್ಥಳೀಯರಾದ ಅಬ್ದುಲ್ ಗಫೂರ್, ಆಶಾ ಕಾರ್ಯಕರ್ತೆ ಭಾರತಿ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.