- Thursday
- November 21st, 2024
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಘಟನೆಗೆ ಸಂಬಂಧಿಸಿದಂತೆ ಆ.9 ರಂದು ಬಂಧಿತನಾದ ಸುಳ್ಯ ಜಟ್ಟಿಪಳ್ಳ ನಿವಾಸಿ ಆರೋಪಿ ಸಿ.ಎ.ಕಬೀರ್ ಎಂಬಾತನನ್ನು ಆ.10 ರಂದು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸುಳ್ಯ ನ್ಯಾಯಾಲಯದಿಂದ ಆಗಸ್ಟ್ 12 ರ ವರೆಗೆ ಆತನಿಗೆ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.
ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಆ.10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮ ಹಾಗೂ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಜಂತುಹುಳ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಒಂದರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡ್ ಜೋಲ್ ಮಾತ್ರೆಗಳ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿ ಶ್ರೀಮತಿ ಲಲಿತಾ ಮಾಹಿತಿ ನೀಡಿದರು. ಇತ್ತೀಚೆಗೆ ಗೌರವ ಡಾಕ್ಟರೇಟ್ ಪಡೆದ...
ಮಡಿಕೇರಿ ಸಂಪಾಜೆ ಹೆದ್ದಾರಿಯ ಮದೆನಾಡು ಬಳಿ ಗುಡ್ಡ ಬಿರುಕು ಬಿಟ್ಟಿದ್ದು ಭೂಕುಸಿತದ ಭೀತಿ ಉಂಟಾಗಿದೆ. ಯಾವುದೇ ಕ್ಷಣದಲ್ಲಿ ಮಣ್ಣು ಜರಿದು ಹೆದ್ದಾರಿಗೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಪಾಜೆ - ಮಡಿಕೇರಿ ನಡುವೆ ಆ.10 ಮತ್ತು 11 ರಂದು ರಾತ್ರಿ 8.30 ರಿಂದ ಬೆಳಗ್ಗೆ 6.30 ಗಂಟೆಯವರೆಗೆ:ಎಲ್ಲಾ ರೀತಿಯ ವಾಹನ ಸಂಚಾರ ಬಂದ್ ಮಾಡಲಾಗುವುದು ಕೊಡಗು ಜಿಲ್ಲಾಧಿಕಾರಿ...
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮತ್ತು ಮನೆ ಮನೆಗೆ ರಾಷ್ಟ್ರಧ್ವಜ ವಿತರಣೆಯ ಕುರಿತು ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಆ.10 ರಂದು ಪೂರ್ವಭಾವಿ ಸಭೆ ನಡೆಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು ಮತ್ತು ಉಪಾಧ್ಯಕ್ಷ ಅನಿಲ್ ತೋಟಾಪ್ಪಾಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಕಲ್ಲಡ್ಕ, ವಿಲೇಜ್ ಆಫೀಸರ್ ಅಜಿತ್,ಮಂಡೆಕೋಲು ಕೃಷಿ...
ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕ, ಬಾಳುಗೋಡು,ಕೊಲ್ಲಮೊಗ್ರ ಗ್ರಾಮದ ನೆರೆ ಪೀಡಿತ ಪ್ರದೇಶಗಳಲ್ಲಿ ವಿಪತ್ತು ಮಿತ್ರ ಬಿಳಿನೆಲೆ ,ಯುವಕ ಮಂಡಲ ಬಿಳಿನೆಲೆ ಮತ್ತು ನವಜೀವನ ಸ್ಪೊರ್ಟ್ಸ್ ಕ್ಲಬ್ ಬಿಳಿನೆಲೆ ಇದರ ಪದಾಧಿಕಾರಿಗಳು ಭಾಗವಹಿಸಿದ್ದರು. ಸುಮಾರು 45 ಯುವಕರ ತಂಡ ಶ್ರಮಸೇವೆಯಲ್ಲಿ ಭಾಗವಹಿಸಿದ್ದಾರೆ.
ಜಂತು ಹುಳು ನಿವಾರಣ ಅಂಗವಾಗಿ ಆ.10 ರಂದು ಸುಳ್ಯದ ಬೊಳುಬೈಲು ಪೀಸ್ ಸ್ಕೂಲ್ ನ ಮಕ್ಕಳಿಗೆ ಜಂತುಹುಳು ನಿವಾರಣೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಬೇಬಿ ವಿಶ್ವನಾಥ್ ಮಾಹಿತಿ ನೀಡಿದರು. ನಂತರ ಆರೋಗ್ಯ ಇಲಾಖೆ ವತಿಯಿಂದ ಮಾತ್ರೆಯನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಸೈಫುಲ್ಲಾ ಹಾಗೂ ಸ್ಥಳೀಯರಾದ ಅಬ್ದುಲ್ ಗಫೂರ್, ಆಶಾ ಕಾರ್ಯಕರ್ತೆ ಭಾರತಿ, ಶಾಲಾ ಶಿಕ್ಷಕ...
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಇವುಗಳ ಆಶ್ರಯದಲ್ಲಿ ದೇಶಭಕ್ತಿ ಗೀತೆ ಗಾಯನ ಅಭಿಯಾನ ಕಾರ್ಯಕ್ರಮವು ಆ.9 ರಂದು ಸರಕಾರಿ ಪ್ರೌಢಶಾಲೆ ಆಲೆಟ್ಟಿಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಉದ್ಘಾಟಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು, ಗೌರವ ಕಾರ್ಯದರ್ಶಿ...
ದೇವಚಳ್ಳ ಗ್ರಾಮದ ವಾಲ್ತಾಜೆ ಶಾಲಾ ವತಿಯಿಂದ ಆ.10 ರಂದು ಎಸ್.ಡಿ.ಎಂ.ಸಿ ಸದಸ್ಯರುಗಳಿಗೆ, ಅಧ್ಯಾಪಕರುಗಳಿಗೆ, ಅಡುಗೆ ಸಿಬ್ಬಂದಿಗಳಿಗೆ ಧ್ವಜ ವಿತರಣೆ ಮಾಡಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ ಧ್ವಜ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಧ್ವಜ ಬಳಸುವ ವಿಧಾನ ಮತ್ತು ಕಾನೂನು ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ನಂದನ್.ಕೆ.ಎಸ್ ಅವರು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಗೌರವ ಶಿಕ್ಷಕಿ ವಂದನಾ,...
ಕಲ್ಲುಗುಂಡಿಯ ಯಶಸ್ವಿ ಯುವಕ ಮಂಡಲದ ಸದಸ್ಯರು ಸಂಪಾಜೆ ಗ್ರಾಮದ ಕಲ್ಲುಗುಂಡಿ ಪರಿಸರದಲ್ಲಿ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಅನೇಕ ನೆರೆ ಸಂತ್ರಸ್ತ ಮನೆಗಳಲ್ಲಿ ಸ್ವಚ್ಚತೆ ಕಾರ್ಯ ನಡೆಸಿದರು.ಸಂಪಾಜೆ ಗ್ರಾಮದ ಗೂನಡ್ಕ ಬಳಿ ಚರಂಡಿಗೆ ಬಿದ್ದ ಮಣ್ಣು ತೆರವುಗೊಳಿಸುವುದು,ಬಿದಿರು ಮತ್ತು ಮರದ ಕೊಂಬೆಗಳನ್ನು ತೆರವು ಗೊಳಿಸುವುದು, ಗ್ರಾಮದ ಎಲ್ಲಾ ಕಡೆ ಪಂಚಾಯತ್ ನೇತೃತ್ವದಲ್ಲಿ ಸಾರ್ವಜನಿಕ ಬಂಧುಗಳು ಸಂಘ ಸಂಸ್ಥೆಯ...
ಜಾಲ್ಸೂರು ಗ್ರಾಮದ ಕುಂಬರ್ಚೋಡುನಿಂದ ಕಾಟೂರ್ ಭಾಗಕ್ಕೆ ಹೋಗುವ ರಸ್ತೆಯು ತೀರಾ ನಾದುರಸ್ತಿಯಲ್ಲಿದ್ದು ಅದನ್ನು ರಸ್ತೆಯ ಫಲಾನುಭವಿಗಳೇಶ್ರಮದಾನದ ಮೂಲಕ ದುರಸ್ತಿ ಮಾಡಿದರು. ಈ ಶ್ರಮದಾನ ದಲ್ಲಿ ದಾಮೋದರ ಶ್ರೀ ಕಟೀಲ್, ಜನಾರ್ದನ ಕಾಟೂರು, ಗೋವಿಂದ ಕಾಟೂರು, ಕೃಷ್ಣ ಕಾಟೂರು, ಪ್ರವೀಣ್ ಉಬರಡ್ಕ, ಇಬ್ರಾಹಿಂ ಕಲ್ಲುಮುಟ್ಲು, ಅಬ್ದುಲ್ ಗಫೂರ್, ನವೀನ್ ಭಟ್, ದುಗ್ಗಣ್ಣ, ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
Loading posts...
All posts loaded
No more posts