
ಭಾರಿ ಮಳೆಯಿಂದಾಗಿ ಕಲ್ಲುಗುಂಡಿಯ ಸುಧಾಕರ ನಾಯ್ಕ್ ಅವರ ಮನೆ ಸಂಪೂರ್ಣವಾಗಿ ಬಿದ್ದು ಹೋಗಿ ಮನೆಯ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿ ನಿರಾಶ್ರಿತರಾಗಿದ್ದರು. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಈ ಸಮಯದಲ್ಲಿ ತೀರಾ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದುದರಿಂದ , ಇವರಿಗೆ ಸಹಾಯ ಹಸ್ತವನ್ನು ನೀಡುವ ಸಲುವಾಗಿ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ನಿರಾಶ್ರಿತ ನಿಧಿ ಯನ್ನು ಸಂಗ್ರಹಿಸಿ ಸುಧಾಕರ್ ನಾಯ್ಕ್ ಅವರಿಗೆ ಅವರ ಕುಟುಂಬಕ್ಕೆ ರೂ 10,000/- ಗಳನ್ನು ನೀಡಿರುತ್ತಾರೆ.