ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳ ಎಂಬಲ್ಲಿ ಮೂರನೇ ಭಾರಿಗೆ ಕಾಲು ಸೇತುವೆ ಸಂಪರ್ಕ ಕಡಿತಗೊಂಡ 12 ಮನೆಗಳಿಗೆ ಸೇವಾ ಭಾರತಿ ತಂಡದವರು ಆ.05 ರಂದು ತಡರಾತ್ರಿಯವರೆಗೂ ಕೆಲಸ ನಿರ್ವಹಿಸಿ ಕಿರು ಸೇತುವೆ ನಿರ್ಮಾಣ ಮಾಡುವ ಮೂಲಕ ಸಂಪರ್ಕ ಸಾಧಿಸಿದ್ದು, ಇನ್ನು ಬಾಕಿ ಉಳಿದ ಕೆಲಸಗಳನ್ನು ಆ.06 ರಂದು ಪೂರ್ಣಗೊಳಿಸಿದ್ದಾರೆ.
ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಭಾಳುಗೋಡು ಅವರು ಉಪ್ಪುಕಳ, ಕೋನಡ್ಕ ಭಾಗಕ್ಕೆ ಫುಡ್ ಕಿಟ್ ತಲುಪಿಸಿದ್ದು, ಅಷ್ಟೇ ಅಲ್ಲದೇ ಸೇವಾ ಭಾರತಿ ತಂಡಕ್ಕೆ ಸಾಥ್ ನೀಡಿದ್ದಾರೆ.
ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗಗಳಲ್ಲಿ ಆ.01ರಿಂದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಾಗುವುದರ ಜೊತೆಗೆ ಶ್ರಮಸೇವೆಯಲ್ಲಿ ತೊಡಗಿದ್ದು, ಸೇವಾ ಭಾರತಿ ಸದಸ್ಯರು ಕೂಡ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರೊಂದಿಗೆ ಕೈ ಜೋಡಿಸುತ್ತಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ