ಶ್ರೀ ತಂಬುರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಅಧೀನಕ್ಕೆ ಒಳಪಡುವ ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಪರಿಧಿ ಯಲ್ಲಿರುವ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಸ್ಥಾನ ದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ದ ಪೂರ್ವಭಾವಿಯಾಗಿ ರಾಶಿ ಚಿಂತನೆ ಮತ್ತು ಮಹೋತ್ಸವ ಸಮಿತಿಯ ರಚನೆಯು ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಪೂಜ್ಯ ಸ್ಥಾನಿಕರ ಮಾರ್ಗದರ್ಶನದಲ್ಲಿ ಜುಲೈ 15ರಂದು ದೈವಸ್ಥಾನ ದ ವಠಾರದಲ್ಲಿ ನಡೆಯಿತು. ರಾಶಿ ಚಿಂತನೆಯನ್ನು ದೈವಜ್ಞರಾದ ಕಲ್ಲಾರ್ ಬಾಲಕೃಷ್ಣ ರವರು ನಡೆಸಿಕೊಟ್ಟರು ಶ್ರೀ ವಯನಾಕುಲವನ್ ದೈವ0ಕಟ್ಟು ಮಹೋತ್ಸವ ವು ಮುಂದಿನ ಮಾರ್ಚ್ 3,4,5 ರಂದು ನಡೆಯಲಿದ್ದು ಫೆಬ್ರವರಿ 10 ರಂದು ಕೂವಂ ಅಳಕ್ಕಲ್ (ಭತ್ತ ಅಳೆಯುವುದು )ಮತ್ತು ಮಾರ್ಚ್ 3ರಂದು ಕಲವರ ನಿರಕ್ಕಲ್ (ಉಗ್ರಾಣ ತುಂಬಿಸುವ)ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕುಂಬಳಚೇರಿ ವಯನಾಟ್ ಕುಲವನ್ ದೈವಸ್ಥಾನ ದ ಆಡಳಿತ ಮಂಡಳಿ ಯ ಪದಾಧಿಕಾರಿಗಳು, ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿ ಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ಸದಸ್ಯರು ಅಲ್ಲದೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
- Wednesday
- December 4th, 2024