Ad Widget

ಕಳೆದುಕೊಳ್ಳುತ್ತಿದ್ದೇವೇನೋ ಸ್ವಾತಂತ್ರ್ಯ?

. . . . .

ಭಾರತ ಜಗತ್ತಿನ ಮುಂದುವರಿದ ದೇಶಗಳಲ್ಲಿ ಒಂದಾಗಿ ಬೆಳೆಯುತ್ತಿರುವುದು ಜನರು ಹೆಮ್ಮೆ ಪಡುವ ವಿಚಾರವಾಗಿದೆ. ಕೃಷಿಯನ್ನು ಮುಖ್ಯ ಕಸುಬಾಗಿಸಿ ಸೈನ್ಯಕ್ಕೆ ಮೊದಲ ಪ್ರಾಧಾನ್ಯತೆ ನೀಡಿ ಬಹು ಸಂಸ್ಕೃತಿಯ ಸುಂದರ ಸ್ವಚ್ಚಂದ ದೇಶವಾಗಿ ಮುಂದುವರಿಯುತ್ತಿದೆ. ಹೀಗಿದ್ದರೂ ಭಾರತವು ಹಲವಾರು ಸಮಸ್ಯೆಗಳನ್ನು ಕೂಡ ಎದುರಿಸುತ್ತಿದೆ.
ಮುಖ್ಯವಾಗಿ ಹೊರಗಿನ ಶತ್ರುಗಳಿಗಿಂತ ಒಳಗಿರುವ ಶತ್ರುಗಳಿಂದಲೇ ಭಾರತ ಸಂಕಷ್ಟ ಅನುಭವಿಸುವಂತಾಗಿದೆ. ದೇಶದ್ರೋಹ ಚಟುವಟಿಕೆ, ಭಯೋತ್ಪಾದಕ ಕೃತ್ಯಗಳಂತಹ ಹಲವಾರು ಸಮಸ್ಯೆ ಭಾರತಕ್ಕೆ ತಲೆನೋವಾಗಿ ಪರಿಣಮಿಸಿರುವುದು ಸುಳ್ಳಲ್ಲ. ಬೇರೆ ದೇಶಗಳಲ್ಲೂ ಕೂಡಾ ಭಯೋತ್ಪಾದನೆ, ದೇಶ ದ್ರೋಹಗಳು ಕಡಿಮೆಯೇನಿಲ್ಲ.
ಆದರೂ ಭಾರತದಲ್ಲಿ ಭಯೋತ್ಪಾದಕರು ದೇಶದ್ರೋಹಿಗಳು ಇತ್ತೀಚಿಗೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವುದು ಆತಂಕಕರ ಬೆಳವಣಿಗೆಯಾಗಿದೆ.
ಭಾರತವು ಸರ್ವಧರ್ಮವನ್ನು ಗೌರವಿಸುವ ದೇಶವಾದರೂ ಕೂಡಾ ಭಯೋತ್ಪಾದನೆ ಪಿಡುಗಿಗೆ ತುತ್ತಾಗಿದೆ. ಬೇರೆ ದೇಶಗಳಂತೆ ಭಯೋತ್ಪಾದನೆ ಹಾಗೂ ದೇಶದ್ರೋಹದಲ್ಲಿ ತೊಡಗಿಕೊಂಡವರನ್ನು ಮುಲಾಜಿಲ್ಲದೆ ಗಲ್ಲಿಗೇರಿಸುವುದೋ ಅಥವಾ ಶೂಟ್ ಔಟ್ ಮಾಡುವ ಕಾನೂನು ಭಾರತದಲ್ಲಿ ಇಲ್ಲದಿರುವುದರಿಂದ ದೇಶದ್ರೋಹಿಗಳು ರಕ್ತಬಿಜಾಸುರರಂತೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ.
ಇದನ್ನೆಲ್ಲ ನಿಯಂತ್ರಿಸಬೇಕಾದ ನಾವೇ ಆರಿಸಿ ಕಳುಹಿಸಿದ ಉನ್ನತ ಸ್ಥಾನದಲ್ಲಿರುವ ರಾಜಕಾರಣಿಗಳು ಅವರವರೊಳಗೆ ಕಚ್ಚಾಟ ನೆಡಸಿಕೊಂಡು ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಹೀಗೆ ಮುಂದುವರಿದರೆ ಮುಂದೊಂದು ದಿನ ಭಾರತವು ಪರಕೀಯರ ಆಳ್ವಿಕೆಯಲ್ಲಿದ್ದಂತೆ ಭಯೋತ್ಪಾದಕರ ದಾಳಿಗೆ ತುತ್ತಾಗಲು ಬಹಳ ದೂರದ ದಿನಗಳೇನೂ ಕಾಣುತ್ತಿಲ್ಲ.
ಭಯೋತ್ಪಾದಕರನ್ನು ಮಟ್ಟಹಾಕದಿದ್ದರೆ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದರಲ್ಲಿ ಅನುಮಾನವಿಲ್ಲ.

✍️ನಿಡುಬೆ ಲೋಹಿತ್ ಕರಿಕೆ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!