ಅರಂತೋಡು ಮರ್ಕಂಜ ಎಲಿಮಲೆ ರಸ್ತೆಯಲ್ಲಿ ವೈ.ಎಂ.ಕೆ.ಚಡಾವು ಬಳಿ ಅಡ್ತಲೆ ನಿವಾಸಿಗಳು ಅಳವಡಿಸಿದ್ದ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಕಿಡಿಗೇಡಿಗಳು ನದಿಗೆ ಎಸೆದಿದ್ದರು. ಅಂದೇ ಮುಖ್ಯಮಂತ್ರಿಗಳು ಅದೇ ರಸ್ತೆಯಲ್ಲಿ ಸುಳ್ಯಕ್ಕೆ ಬರುವವರಿದ್ದರು. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬ್ಯಾನರ್ ತೆಗಿದಿದ್ದಾರೆಂದು ಖಂಡಿಸಿ ಅಡ್ತಲೆಯ ನಾಗರಿಕರು ಬ್ಯಾನರ್ ಕಿತ್ತೆಸೆದವರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗಿದ್ದರು. ಆ.7 ರಂದು ಪುನಃ ರಸ್ತೆಯ ಫಲಾನುಭವಿಗಳು ವೈ.ಎಂ.ಕೆ. ಬಳಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.
- Wednesday
- December 4th, 2024