ಸಹಕಾರಿ
ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮಾಡಿದೆ. ಸದಸ್ಯರ ಬಳಿಗೆ ಸಹಕಾರಿ ಸಂಘದ ಸೇವೆಗಳನ್ನು ತಲುಪಿಸಿ ಸರ್ವ ಸದಸ್ಯರು ಸಹಕಾರಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲು ಈ ಹೆಜ್ಜೆ ಇರಿಸಿದೆ.
ಸದಸ್ಯರಿಗೆ ಸಹಕಾರ ಸಂಘದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ವಿನಿಮಯದ ಸರಣಿ ಕಾರ್ಯಕ್ರಮ ಸಹಕಾರಿ ಸಮುದಾಯ ಸಂಪರ್ಕ ಸಭೆಯ ಉದ್ಘಾಟನಾ ಸಮಾರಂಭ ಆ.7 ರಂದು ಅಡ್ತಲೆ ಶಾಲೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್ವ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಹಕಾರಿ ಸಂಘ ಅಭಿವೃದ್ಧಿ ಯಾಗಬಹುದು ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಸಂಘದ ಹಿರಿಯ ಸದಸ್ಯ ಆನಂದ ಗೌಡ ಜೋಡಿಪಣೆ, ಅತಿಥಿಗಳಾಗಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಉಪಾಧ್ಯಕ್ಷೆ ಕು. ಶ್ವೇತಾ ಅರಮನೆಗಯ, ಗ್ರಾ.ಪಂ.ಸದಸ್ಯ ಕೇಶವ ಅಡ್ತಲೆ, ಗ್ರಾ.ಪಂ.ಸದಸ್ಯೆ ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ, ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗೋಪಾಲ ಪಿಂಡಿಮನೆ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ಸಹಕಾರಿ ಸಂಘದ ನಯನ ಕುಮಾರ್ ಕಿರ್ಲಾಯ ವಂದಿಸಿದರು.