Ad Widget

ನಡುಗಲ್ಲು :- ವಿದ್ಯುತ್ ಲೈನ್ ಗೆ ತಾಗುವ ಗೆಲ್ಲು ಕಡಿಯುವ ಮೂಲಕ ಶ್ರಮದಾನ

ಆ.07 ರಂದು ನಡುಗಲ್ಲು ಶಾಲೆಯ ಹತ್ತಿರದಿಂದ ಅಂಬೆಕಲ್ಲು, ಹಲ್ಗುಜಿ, ಕಲ್ಲಾಜೆಯವರೆಗೆ ವಿದ್ಯುತ್ ಲೈನ್ ಗೆ ತಾಗುವ ಗೆಲ್ಲು ಕಡಿಯುವ ಮೂಲಕ ಶ್ರಮದಾನ ಮಾಡಲಾಯಿತು. ಊರಿನವರು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಹಾಗೂ ಮೆಸ್ಕಾಂ ನವರು ಸಹಕರಿಸಿದರು. ವರದಿ :- ಉಲ್ಲಾಸ್ ಕಜ್ಜೋಡಿ

ಜಟ್ಟಿಪಳ್ಳ :- ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ, ಪದಗ್ರಹಣ ಸಮಾರಂಭ

ಮಾನಸ ಮಹಿಳಾ ಮಂಡಲದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆ.07 ರಂದು ಜಟ್ಟಿಪಳ್ಳದ ಯುವ ಸದನದಲ್ಲಿ ಜರುಗಿತು. ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪುರುಷೋತ್ತಮ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆವಿಜಿ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಅರ್ಚನಾ ಆರ್ ರೈ ಆಗಮಿಸಿ ಪ್ರಮಾಣ ವಚನ ಭೋದಿಸಿದರು. ಮಹಿಳಾ...
Ad Widget

ಪ್ರವೀಣ್ ಹತ್ಯೆ ಪ್ರಕರಣ – ಮತ್ತಿಬ್ಬರ ಬಂಧನ

ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ ಆರಕ್ಕೇರಿದೆ.ಸುಳ್ಯದ ನಾವೂರು ಬಳಿಯ ನಿವಾಸಿ ಆಬಿದ್ (22) ಹಾಗೂ ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ (28) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ‌

ಅರಂತೋಡು : ಕಿಡಿಗೇಡಿಗಳು ಕಿತ್ತೆಸೆದ ಜಾಗದಲ್ಲಿ ಮತ್ತೆ ಚುನಾವಣಾ ಬಹಿಷ್ಕಾರದ ಬ್ಯಾನರ್

ಅರಂತೋಡು ಮರ್ಕಂಜ ಎಲಿಮಲೆ ರಸ್ತೆಯಲ್ಲಿ ವೈ.ಎಂ.ಕೆ.ಚಡಾವು ಬಳಿ ಅಡ್ತಲೆ ನಿವಾಸಿಗಳು ಅಳವಡಿಸಿದ್ದ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಕಿಡಿಗೇಡಿಗಳು ನದಿಗೆ ಎಸೆದಿದ್ದರು. ಅಂದೇ ಮುಖ್ಯಮಂತ್ರಿಗಳು ಅದೇ ರಸ್ತೆಯಲ್ಲಿ ಸುಳ್ಯಕ್ಕೆ ಬರುವವರಿದ್ದರು. ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಬ್ಯಾನರ್ ತೆಗಿದಿದ್ದಾರೆಂದು ಖಂಡಿಸಿ ಅಡ್ತಲೆಯ ನಾಗರಿಕರು ಬ್ಯಾನರ್ ಕಿತ್ತೆಸೆದವರಿಗೆ ಶಿಕ್ಷೆ ನೀಡುವಂತೆ ದೈವದ ಮೊರೆ ಹೋಗಿದ್ದರು. ಆ.7 ರಂದು ಪುನಃ ರಸ್ತೆಯ...

ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗಗಳಲ್ಲಿ ಭಾರೀ ಮಳೆ.- ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರ ಜೊತೆಗೆ ಕೈ ಜೋಡಿಸುತ್ತಿರುವ ಶೌರ್ಯ ವಿಪತ್ತು ನಿರ್ವಹಣಾ ಘಟಕ.

ಕಳೆದ ಕೆಲವು ದಿನಗಳಿಂದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭಾರೀ ಹಾನಿಗಳಾಗುತ್ತಿರುವ ಘಟನೆಗಳು ಮುಂದುವರಿದಿವೆ. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಾಗುವ ಕಾರ್ಯ ಮಾಡುತ್ತಿದ್ದು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯರ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

ಕಲ್ಮಡ್ಕ : ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ

ಮರಾಟಿ ಸಮಾಜ ಸೇವಾ ಸಂಘ ಕಲ್ಮಡ್ಕ ಇದರ ವಾರ್ಷಿಕ ಮಹಾಸಭೆ ಆ. 07ರಂದು ಸಂಘದ ಅಧ್ಯಕ್ಷರಾದ ತಿಮ್ಮಪ್ಪ ನಾಯ್ಕ ಉಡುವೆಕೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ತೀರ್ಥಾನಂದ ಕಲ್ಮಡ್ಕ ಲೆಕ್ಕಪತ್ರ ಮತ್ತು ವಾರ್ಷಿಕ ವರದಿಯನ್ನು ಮಂಡಿಸಿದರು.ನಂತರ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ವೆಂಕಪ್ಪ ನಾಯ್ಕ ಮಂಞನಕಾನ ಮರಾಟಿ ಸಮುದಾಯದ ಬಗ್ಗೆ ಮತ್ತು...

ಮರ ಕೊಯ್ಯುವ ಮಿಷನ್ ತಾಗಿ ಶಸ್ತ್ರಚಿಕಿತ್ಸೆ ಒಳಗಾದ ಕುಶಾಲಪ್ಪ ಜಾಲುಮನೆ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರು

ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಭಾರೀ ಮಳೆಗೆ ಹಾನಿ ಸಂಭವಿಸಿದ್ದು, ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳು ಶ್ರಮಸೇವೆಯಲ್ಲಿ ನಿರತರಾಗಿದ್ದಾರೆ. ಶ್ರಮಸೇವೆಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕುಶಾಲಪ್ಪ ಜಾಲುಮನೆ ಅವರ ಕಾಲಿಗೆ ಮರ ಕೊಯ್ಯುವ ಮಿಷನ್...

ಅಂತರಾಷ್ಟ್ರೀಯ ಸ್ನೇಹದಿನ

ಕವಿ “ನಾ ಕೃ ಸತ್ಯನಾರಾಯಣ” ಅವರು ಬರೆದ ಸುಂದರ ಭಾವಗೀತೆ “ಸ್ನೇಹ ಅತಿ ಮಧುರ , ಸ್ನೇಹ ಅದು ಅಮರ……” ಎಂಬ ಹಾಡಿನ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ,ಅಗೋಸ್ತು ತಿಂಗಳ ಮೊದಲ ಭಾನುವಾರ ಬಂತೆಂದರೆ ನೆನೆಪಿಸಬೇಕಾದ ವಿಷಯವೆಂದರೆ ‘ “ಸ್ನೇಹದಿನ”. ಹ್ಯಾಪಿ ಫ್ರೆಂಢ್ ಶಿಪ್ ಡೇ ಎಂದು ಕೈ ಕುಲುಕುವ ಮಾತ್ರಕ್ಕೆ ಇಂದು ಸ್ನೇಹ-ಸಂಬಂಧ ನಿಂತಿದೆ. ಪ್ರತಿವರ್ಷ ಅಗೋಸ್ತು...

ಮರ್ಕಂಜ : ಕೊಟ್ಟಿಗೆ ಬಿದ್ದು ಅಪಾರ ನಷ್ಟ- ಪ್ರಾಣಪಾಯದಿಂದ ಪಾರು

ಮರ್ಕಂಜ ಗ್ರಾಮದ ಬಾಣೂರು ಜಯಾನಂದ ರವರ ಕೊಟ್ಟಿಗೆ ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ಇಂದು (ಆ.7) ನಡೆದಿದೆ. ದೈನಂದಿನ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಾಡಿನಿಂದ ಹಂಚು ಬೀಳಲು ಆರಂಭಿಸಿದಾಗ ಅಪಾಯ ಅರಿತ ಜಯಾನಂದ ರವರು ಹೊರಗೆ ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಟ್ಟಿಗೆಯಲ್ಲಿದ ವಸ್ತುಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಕೊಟ್ಟಿಗೆಯಲ್ಲಿದ್ದ ಹಸುಗಳುಗಳನ್ನು ತೋಟದಲ್ಲಿ ಮೇಯಲು...

ಬಳ್ಳಕ್ಕ :- 34ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆ. ಅಧ್ಯಕ್ಷರಾಗಿ ಗಂಗಾಧರ ಚಿಕ್ಮುಳಿ. ಕಾರ್ಯದರ್ಶಿಯಾಗಿ ಉಜಿತ್ ಶ್ಯಾಮ್ ಚಿಕ್ಮುಳಿ.

ಗುತ್ತಿಗಾರು ಗ್ರಾಮದ ಬಳ್ಳಕ್ಕದಲ್ಲಿ ವರ್ಷಂಪ್ರತಿ ನಡೆಯುವ ಗಣೇಶೋತ್ಸವವು ಈ ಭಾರಿ 34ನೇ ವರ್ಷವನ್ನು ಪೂರೈಸುತ್ತಿದ್ದು, ನೂತನ ಗಣೇಶೋತ್ಸವ ಸಮಿತಿಯನ್ನು ಇತ್ತೀಚೆಗೆ ರಚನೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಗಂಗಾಧರ ಚಿಕ್ಮುಳಿ, ಕಾರ್ಯದರ್ಶಿಯಾಗಿ ಉಜಿತ್ ಶ್ಯಾಮ್ ಚಿಕ್ಮುಳಿ, ಖಜಾಂಚಿಯಾಗಿ ದಿನೇಶ್ ಬಪ್ಪನಮನೆ ಅವರುಗಳನ್ನು ಆಯ್ಕೆ ಮಾಡಲಾಯಿತು. ಹಲವು ಮಂದಿಯನ್ನು ಸದಸ್ಯರುಗಳಾಗಿ ಸಮಿತಿಗೆ ಸೇರ್ಪಡೆಗೊಳಿಸಲಾಯಿತು. ಗಣೇಶೋತ್ಸವ ಸಮಿತಿಯ ಟ್ರಸ್ಟ್...
Loading posts...

All posts loaded

No more posts

error: Content is protected !!