ಕೇಂದ್ರ ಸರಕಾರದ ಆದೇಶದಂತೆ ಹರ್ ಹರ್ ತಿರಂಗಾ ಕಾರ್ಯಕ್ರಮದ ಅಂಗವಾಗಿ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಆದೇಶ ನೀಡಿದೆ. ಆದರೇ ಪಾಲಿಸ್ಟಾರ್ ಬಟ್ಟೆ ಬಳಸಿ ರಾಷ್ಟಧ್ವಜ ತಯಾರಿಸಲು ತೀರ್ಮಾನಿಸಿದೆ. ಇದರಿಂದಾಗಿ ಖಾದಿ ಬಟ್ಟೆಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಸೇವಾ ದಳದ ಜಿಲ್ಲಾಧ್ಯಕ್ಷ ಗೋಕುಲ್ ದಾಸ್ ಆರೋಪ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ರಾಷ್ಟ್ರಧ್ವಜಗಳನ್ನು ಮಾರಾಟಕ್ಕಿಟ್ಟು ಧ್ವಜಸಂಹಿತೆ ಉಲ್ಲಂಘಿಸಲಾಗಿದೆ. ಪಾಲಿಸ್ಟಾರ್ ಬಟ್ಟೆಗಳನ್ನು ಬಳಸಿ ಖಾದಿ ಬಟ್ಟೆಗೆ ಅಗೌರವ ತೋರಲಾಗಿದೆ. ಧ್ವಜದ ವಿನ್ಯಾಸ ಕೂಡ ಸರಿ ಇಲ್ಲ. ರೂ.25 ರಂತೆ ಮಾರಾಟ ಮಾಡಲು ನಿರ್ದೇಶನ ಇದ್ದು ಮಾರಾಟ ಮಾಡಿದ ಹಣ ಎಲ್ಲಿಗೆ ಹೋಗುತ್ತಿದೆ. ಈ ಬಗ್ಗೆ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ನಂದರಾಜ್ ಸಂಕೇಶ್ ಮಾತನಾಡಿ ಗುಜರಾತ್, ಉತ್ತರ ಪ್ರದೇಶ ಮಾದರಿ ಆಗಬಾರದು, ಭಾರತ ಮಾದರಿ ಆಗಬೇಕು, ಧ್ವಜವನ್ನು ಖಾದಿ ಬಟ್ಟೆಯಿಂದ ಮಾಡಬೇಕಿತ್ತು, ಮಾರಾಟ ಮಾಡುವ ಬದಲು ಉಚಿತವಾಗಿ ನೀಡಬೇಕು, ಕಾನೂನುಗಳಿಗೆ ಗೌರವ ನೀಡದೇ ವ್ಯಾಪಾರೀಕರಣ ಮಾಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಸೇವಾದಳದ ಜಯಪ್ರಕಾಶ್ ನೆಕ್ರಪ್ಪಾಡಿ, ಶಶಿಧರ ಎಂ.ಜೆ.,ಅನಿಲ್ ಬಳ್ಳಡ್ಕ, ಭವಾನಿಶಂಕರ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ ಉಪಸ್ಥಿತರಿದ್ದರು.