- Friday
- November 1st, 2024
ತಾಲೂಕಿನ ವಿವಿಧ ಭಾಗಗಳಲ್ಲಿ ಒಂದು ವಾರದೊಳಗೆ ಐದು ಬಾರಿ ಭೂಕಂಪನದ ಅನುಭವವಾಗಿದ್ದು ಮತ್ತು ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆಯ ಮುನ್ನೆಚ್ಚರಿಕೆಯ ಭಾಗವಾಗಿ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ರೆಸ್ಕ್ಯೂ ತಂಡವನ್ನು ರಚಿಸಲಾಯಿತು.ಇದರ ಭಾಗವಾಗಿ ಸ್ವಯಂ ಸೇವಕರಿಗೆ ತುರ್ತು ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳ ಬಗ್ಗೆ ವಿಸ್ಕೃತವಾಗಿ ತಿಳಿಸಿಕೊಡಲಾಯಿತು. ಹಾಗೂ ಯಾವುದೇ ಸಂದರ್ಭದಲ್ಲೂ ತುರ್ತು...
ಅರಂತೋಡು ಅಡ್ಯಡ್ಕ ಸಮೀಪ ಅಜ್ಜನಗದ್ದೆ ಎಂಬಲ್ಲಿ ಪಿಕಪ್ ವಾಹನ ಪಲ್ಟಿಯಾದ ಘಟನೆ ಇಂದು ನಡೆದಿದೆ. ಹಂದಿ ಸಾಗಿಸುತ್ತಿದ್ದ ವಾಹನವಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಐವರ್ನಾಡಿನಲ್ಲಿ ಸಂಭವಿಸಿದ ವಿದ್ಯುತ್ ದುರಂತವೊಂದರಲ್ಲಿ ನಾಲ್ಕು ವರ್ಷದ ಬಾಲಕ ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ. ಐವರ್ನಾಡಿನ ಆದಂ ಎಂಬವರ ಪುತ್ರಿ, ರಿಕ್ಷಾ ಡ್ರೈವರ್ ಅಜರ್ ಅವರ ಸಹೋದರಿ ಅಪ್ಸರವರ ಮಗ ಹೈದರ್ ಅಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪ್ರಿಡ್ಜ್ ನ ಮುಟ್ಟಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ.
ಜು. 2 ರಂದು ಸಂಭವಿಸಿದ (6ನೇ ಬಾರಿಗೆ) ಕಂಪನದ ಕೇಂದ್ರ ಬಿಂದು ಸುಳ್ಯ ತಾಲೂಕಿನ ದೊಡ್ಡಕುಮೇರಿ ಎಂದು ದಾಖಲಾಗಿದೆ. ರಿಕ್ಟರ್ ಸ್ಕೇಲ್‌ನಲ್ಲಿ 1.8 ದಾಖಲಾದ ಭೂ ಕಂಪ ಉಂಟಾಗಿದೆ. ದೊಡ್ಡಕುಮೇರಿ ಕೇಂದ್ರ ಬಿಂದುವಿನಿಂದ1.3 ಕಿ.ಮಿ.ವ್ಯಾಪ್ತಿಯಲ್ಲಿ 1 ಗಂಟೆ 21 ನಿಮಿಷ 50 ಸೆಕೆಂಡ್‌ಗೆ ಭೂಮಿ ಕಂಪಿಸಿದೆ. 10 ಕಿ.ಮಿ ಆಳದಲ್ಲಿ ಭೂ ಕಂಪನ ಉಂಟಾಗಿದೆ ಎಂದು...
ಬಾಳಿಲ ಗ್ರಾಮದ ಕಾವಿನಮೂಲೆ ನಾರಾಯಣ ಭಟ್ಟರ ತಾಳೆ ತೋಟದಲ್ಲಿ ಹೆಬ್ಬಾವೊಂದು ಕಂಡುಬಂದಿದ್ದು ಅದನ್ನು ಸ್ಥಳೀಯರಾದ ಕರುಣಾಕರ ಶೆಟ್ಟಿಯವರ ಸಹಕಾರದೊಂದಿಗೆ ಪಂಜ ಅರಣ್ಯ ಸಿಬ್ಬಂದಿಗಳಾದ ಗಣೇಶ್ ಹಾಗೂ ಬರಮಪ್ಪ ರವರು ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಚೆಂಬು, ಗೂನಡ್ಕ ಭಾಗದಲ್ಲಿ ಮಧ್ಯಾಹ್ನ 1.21ಕ್ಕೆ ಭಾರಿ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಜತೆಗೆ ಭಾರಿ ಶಬ್ಧ ಕೇಳಿ ಬಂದಿದೆ. ಭೂಮಿ ಕಂಪಿಸಿದ ಅನುಭವ ನೀಡಿದ್ದು ಜನರನ್ನು ಭಯಭೀತರನ್ನಾಗಿಸಿದೆ.
ಗುತ್ತಿಗಾರು ಗ್ರಾಮ ಪಂಚಾಯತ್‌ನ ಈ ಕೆಳಗಿನ ಕಾಣಿಸಿದ ಬಾಡಿಗೆ ಕಟ್ಟಡಗಳನ್ನು ದಿನಾಂಕ 04 - 07 - 2022 ನೇ ಸೋಮವಾರ ಅಪರಾಹ್ನ ಗಂಟೆ 3.00 ಕ್ಕೆ ಸರಿಯಾಗಿ ಗ್ರಾ.ಪಂ. ಕಛೇರಿಯಲ್ಲಿ ಬಹಿರಂಗವಾಗಿ ಏಲಂ ಮಾಡಲಾಗುವುದು. ಮೆಟ್ಟಿನಡ್ಕ ಬಸ್ಸು ತಂಗುದಾಣ ಅಂಗಡಿ ಕೋಣೆ, ಹಾಲೆಮಜಲು ಬಸ್ಸು ತಂಗುದಾಣ ಅಂಗಡಿ ಕೋಣೆ, ಕಮಿಲ ಬಸ್ಸು ತಂಗುದಾಣ ಅಂಗಡಿ...
ಸುಳ್ಯದಲ್ಲಿ ಹಲವಾರು ವರುಷಗಳಿಂದ ಸ್ಟುಡಿಯೋ ನಡೆಸಿಕೊಂಡು ಬರುತ್ತಿರುವ ಗೋಪಾಲಕೃಷ್ಣ ಕೆ.ಎಸ್ ರವರಿಗೆ ರಾಜ್ಯ ಮಟ್ಟದ ಛಾಯಾ ಸಾಧಕ ಪ್ರಶಸ್ತಿಗೆ ಭಾಜನರಾಗಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂ.28 ರಂದು ನಡೆದ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಛಾಯಾ ಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಮುರಳಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು...
ರಸ್ತೆ ಬದಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದ ವ್ಯಕ್ತಿಗೆ 5 ಸಾವಿರ ದಂಡ ವಿಧಿಸಿ ಆತನಿಂದಲೇ ತ್ಯಾಜ್ಯ ತೆರವುಗೊಳಿಸಿದ ಘಟನೆ ಐವರ್ನಾಡು ಗ್ರಾ.ಪಂ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ನಡೆದಿದೆ. ಜೂ.1 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಬಗ್ಗೆ ಪಿಡಿಓಗೆ ದೂರು ಹೋಗಿತ್ತು.ತಕ್ಷಣ ಎಚ್ಚೆತ್ತ ಪಿಡಿಒ ಶ್ಯಾಮ್ ಪ್ರಸಾದ್...
ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿಯಾಗಿದೆ. ಚೆಂಬು ಗ್ರಾಮದ ಪೂಜಾರಿಗದ್ದೆ ಗಿರಿಧರ ಎಂಬವರ ಮನೆ ಮೇಲೆ ಕುಸಿದ ಮಣ್ಣು ಕುಸಿದಿದೆ. ರಾತ್ರಿ ಸುಮಾರು 3 ಗಂಟೆ ಸಮಯದಲ್ಲಿ ಶಬ್ಧದೊಂದಿಗೆ ಕುಸಿದ ಮಣ್ಣು ಕುಸಿದಿದೆ. ರಾತ್ರಿಯಿಡೀ ನಿರಂತರ ಮಳೆ ಸುರಿದ ಹಿನ್ನೆಲೆ ಭೂಕುಸಿತ ವಾಗಿರುವ ಸಾಧ್ಯತೆ ಎನ್ನಲಾಗಿದೆ. ಸರಣಿ ಭೂಕಂಪನ ಕೇಂದ್ರ ಸ್ಥಳದಲ್ಲಿ ಭೂಕುಸಿತದಿಂದ ಆಗಿರುವುದರಿಂದ ಸ್ಥಳೀಯರಲ್ಲಿ...
Loading posts...
All posts loaded
No more posts