- Friday
- November 22nd, 2024
ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಸದ್ಯ ಪ್ರವಾಹ ನೀರಿನಲ್ಲೇ ಭಕ್ತರು ತೀರ್ಥಸ್ನಾನ ನೆರವೇರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಜೇಸಿಐ ವಿಟ್ಲ ಘಟಕದ ವತಿಯಿಂದ ಜು.3 ರಂದು ನಡೆದ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀ ಘಟಕಕ್ಕೆ ವಲಯದಿಂದ ಕೊಡಮಾಡುವ ವಲಯಾಭಿವೃದ್ಧಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಜೇಸಿಐ ಪಂಜ ಪಂಚಶ್ರೀಯ ಘಟಕಾಧ್ಯಕ್ಷರಾದ ಜೆ.ಎಫ್.ಎಮ್ ಶಿವಪ್ರಸಾದ್ ಹಾಲೆಮಜಲು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಘಟಕದ ಪೂರ್ವಾದ್ಯಕ್ಷರಾದ ಜೆ.ಎಫ್.ಎಂ. ನಾಗಮಣಿ ಕೆದಿಲ, ಉಪಾಧ್ಯಕ್ಷರಾದ ಜೆ ಎಫ್ ಎಮ್...
ಕೇನ್ಯ ಶ್ರೀ ದುರ್ಗಾ ಸೇವಾ ಸಂಘದ "ನಮ್ಮೂರ ಶಾಲೆ ಉಳಿಸಿ ಅಭಿಯಾನಕ್ಕೆ ಓಗೊಟ್ಟು ಮುಂಬಯಿಯ ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್" ಇವರು ಕೇನ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಣ್ಕಲ್ ಇಲ್ಲಿನ ಮಕ್ಕಳಿಗೆ ಸಮವಸ್ತ್ರ ಮತ್ತು ನೋಟ್ ಪುಸ್ತಕ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಕಣ್ಕಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ...
ರಾಜ್ಯದ ಅತ್ಯತ್ತಮ ಮತ್ತು ಪ್ರತಿಷ್ಠಿತ ರಂಗ ತರಬೇತಿ ಸಂಸ್ಥೆಯಾದ ನೀನಾಸಂ ಗೆ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸುಳ್ಯ ತಾಲೂಕಿನ ಕಲ್ಮಕಾರಿನ ಮಮತ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕಡೆಗಳಿಂದ ಸುಮಾರು 125 ರಂಗಾಸಕ್ತರು ಭಾಗವಹಿಸಿದ್ದು ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಮತಾ ಕಲ್ಮಕಾರು ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ. ಸುಳ್ಯದ ರಂಗಮನೆಯ ವಿದ್ಯಾರ್ಥಿ ಆಗಿರುವ ಮಮತ...
ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ನಿರಂತರ ಕಂಪನ ಸಂಭವಿಸುತ್ತಿದ್ದು ಜು.3 ರಂದು ರಾತ್ರಿ 9.18 ಕ್ಕೆ ಭೂಮಿ ಕಂಪಿಸಿದೆ. ಮೊದಲಿಗೆ ಶಬ್ಧ ಹಾಗೂ ನಂತರ ಸಣ್ಣ ಮಟ್ಟಿನ ಕಂಪನ ಆಗಿದೆ ಎಂದು ಚೆಂಬು ನಿವಾಸಿಗಳು ಮಾಹಿತಿ ನೀಡಿದ್ದಾರೆ. ಹಿಂದಿನ ಕಂಪನಗಳಿಗೆ ಹೋಲಿಸಿದರೆ ಇದು ಲಘು ಪ್ರಮಾಣದಲ್ಲಿತ್ತು ಎನ್ನಲಾಗಿದೆ.
ನಡುಗಲ್ಲು ಹರಿಹರಪಲ್ಲತ್ತಡ್ಕ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸಂಚಾರಕ್ಕೆ ಅಡಚಣೆಯಾಗಿದ್ದು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ಕರ್ನಾಟಕದ ಪ್ರತಿಷ್ಠಿತ ರಂಗ ಶಿಕ್ಷಣ ಕೇಂದ್ರವಾಗಿರುವ ನೀನಾಸಂ ನ 2022-23 ನೇ ಸಾಲಿನ ರಂಗಪದವಿ ವಿದ್ಯಾರ್ಥಿನಿಯಾಗಿ, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯದ ಪ್ರತಿಭೆ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಡೆಸಿದ ರಂಗ ಪಯಣದ ಸಾಹೇಬ್ರು ಬಂದವೇ ನಾಟಕದ ಮುಖ್ಯ ನಟಿ ಕುಮಾರಿ ಮಮತಾ ಕಲ್ಮಕಾರು ಇವರು ಆಯ್ಕೆ ಆಗಿರುತ್ತಾರೆ.ಮಮತಾರವರು ಅರೆಭಾಷೆ...
ಚೆಂಬು, ಸಂಪಾಜೆ ಗೂನಡ್ಕ, ತೊಡಿಕಾನ ಸೇರಿದಂತೆ ವಿವಿಧೆಡೆ ಇಂದು ರಾತ್ರಿ 8.28 ಕ್ಕೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ತಿಳಿದು ಬಂದಿದೆ
ಕೊಲ್ಲಮೊಗ್ರ ಗ್ರಾಮದ ತೋಟದಮಜಲು ಎಂಬಲ್ಲಿ ವ್ಯಕ್ತಿಯೊರ್ವರಿಗೆ ಅಪರಿಚಿತನೋರ್ವ ಚೂರಿ ಇರಿದ ಘಟನೆ ವರದಿಯಾಗಿದೆ. ತೋಟದಮಜಲಿನಲ್ಲಿ ಕಳೆದ 10 ವರ್ಷಗಳಿಂದ ನೆಲೆಸಿದ್ದ ಲೂಕೋಸ್ ಎಂಬವರು ಚೂರಿ ಇರಿತದಿಂದ ಗಾಯಗೊಂಡ ವ್ಯಕ್ತಿ. ದೇಹದ 5 ಕಡೆ ಚೂರಿ ಇರಿತದಿಂದ ಗಾಯಗಳಾಗಿದ್ದು, ಸ್ಥಳೀಯರು ಸುಬ್ರಹ್ಮಣ್ಯ ಪೋಲೀಸರಿಗೆ ಮಾಹಿತಿ ನೀಡಿ ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ.
Loading posts...
All posts loaded
No more posts