- Friday
- November 22nd, 2024
ಬಳ್ಪದಲ್ಲಿ ಸಂಸದ ನಳಿನ್ ಕುಮಾರ್ ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಇತಿಹಾಸ ಪ್ರಸಿದ್ಧ ಭೋಗಾಯನ ಕೆರೆ ಅಭಿವೃದ್ಧಿಪಡಿಸಿದ್ದರು. ಇದೀಗ ವ್ಯಾಪಕ ಮಳೆಗೆ ಕೆರೆಯ ಕಟ್ಟೆ ಕುಸಿದುಬಿದ್ದಿದೆ. ಈ ಬಗ್ಗೆ ಕಳಪೆ ಕಾಮಗಾರಿಯ ಆರೋಪ ಕೇಳಿ ಬಂದಿದೆ.
ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ನೆಯ್ಯೋಣಿ ಕಟ್ಟಡದಲ್ಲಿ ಕೆ.ಎಸ್.ಆರ್.ಟಿ.ಸಿ. ಯ ನಿವೃತ ಸಂಚಾರ ನಿಯಂತ್ರಕರಾದ ಹರಿಶ್ಚಂದ್ರ ಮೇಲಡ್ತಲೆ ಅವರ ಪುತ್ರಿ ಡಾ. ಶ್ರೀನಿಧಿ ಎಂ.ಎಚ್ ಮಾಲಕತ್ವದ ಶ್ರೀನಿಧಿ ಕ್ಲಿನಿಕ್ ಜು.6 ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಲಕರ ತಂದೆ ಹರಿಶ್ಚಂದ್ರ ಮೇಲಡ್ತಲೆ, ತಾಯಿ ಶ್ರೀಮತಿ ಜಲಜಾ, ಶಿವಣ್ಣ ಗೌಡ, ಶ್ರೀಮತಿ ವೆಂಕಮ್ಮ, ಕಟ್ಟಡದ ಮಾಲಕರಾದ...
ಕಂದಾಯ ಸಚಿವ ಆರ್.ಅಶೋಕ್ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ಕುಮಾರ್ ಭೂಕಂಪನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಳೆಹಾನಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಅರಂತೋಡು:ಸಮಸ್ತ ಕೇರಳ ಸುನ್ನಿ ಬಾಲ ವೇದಿ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸಹದ್ ಫೈಝಿ ಸಂಪಾದಕತ್ವದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ವನ್ನು ಜು.6ರಂದು ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ಬಿಡುಗಡೆಗೊಳಿಸಿದರು. ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಕರ್ನಾಟಕ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ವಲಯ, ಸುಳ್ಯ ತಾಲೂಕು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ ಶಾಲೆ ಬಾಳುಗೋಡು ಇವರ ಜಂಟಿ ಆಶ್ರಯದಲ್ಲಿ ಜು. 07 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳುಗೋಡಿನಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರವೀಣ್...
ಬಾಳುಗೋಡು ಕೊಲ್ಲಮೊಗ್ರ ಕಲ್ಮಕಾರು ಭಾಗದಲ್ಲಿ ಸುರಿದ ವ್ಯಾಪಕ ಮಳೆಗೆ ಹರಿಹರಪಲ್ಲತ್ತಡ್ಕದ ಸಂಗಮಕ್ಷೇತ್ರ ಅಯ್ಯಪ್ಪ ದೇವಸ್ಥಾನದ ಆವರಣ ಮುಳುಗಡೆಯಾಗಿದೆ.
ಕಳ್ಳರು ಮನೆಯೊಂದರಿಂದ ಕದ್ದಿದ್ದ 10 ಗೋಣಿ ಕಾಳುಮೆಣಸನ್ನು ಸಾಗಿಸುತ್ತಿದ್ದ ವೇಳೆ ಬೆಳ್ಳಾರೆ ಠಾಣಾ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಕಳಂಜ ನಿವಾಸಿ ಮಂಜು, ಕೊಡಿಯಲ ಬೈಲು ನಿವಾಸಿ ಪ್ರವೀಣ, ಜಾಲ್ಸೂರು ಗ್ರಾಮದ ಬೆರ್ಪಡ್ಕ ನಿವಾಸಿ ಪವನ್ ಕುಮಾರ್ ಹಾಗೂ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಎಂದು...
ಮಳೆಗಾಲ ಆರಂಭ ದಿನಗಳಿಂದ ಆರಂತೋಡು, ತೊಡಿಕಾನ ಸಂಪಾಜೆ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಜನಪ್ರತಿನಿಧಿಗಳು ಸಚಿವ ಎಸ್. ಅಂಗಾರರಿಗೆ ಮನವಿ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಸಚಿವರು ಮೆಸ್ಕಾಂ ನ ಸಹಾಯಕ ತಾಂತ್ರಿಕ ಅಧಿಕಾರಿ ಸುಪ್ರಿತ್ ಅವರನ್ನು ಕಛೇರಿಗೆ ಕರೆಸಿ ನಿರಂತರ ವಿದ್ಯುತ್ ನೀಡಲು ಆಗಬೇಕಾಗಿರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಆದೇಶಿಸಿದರು....
ಬಳ್ಪ ಗ್ರಾಮದ ಆಲ್ಕಬೆ ಎಂಬಲ್ಲಿ ಗುಡ್ಡ ಕುಸಿತ ಜು.4 ರಂದು ಗುಡ್ಡ ಕುಸಿದಿದ್ದು ಸಂಚಾರಕ್ಕೆ ತಡೆಯುಂಟಾಗಿದೆ.ರಸ್ತೆಯಲ್ಲಿ ಘನ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಸಂಪೂರ್ಣವಾಗಿ ಕೆಸರುಮಯವಾಗಿ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ ಮಳೆ ಇದೇ ರೀತಿ ಮುಂದುವರಿದರೆ ಗುಡ್ಡ ಇನ್ನಷ್ಟೂ ಕುಸಿಯುವ ಭೀತಿಯಲ್ಲಿದೆ. ಪಂಚಾಯಿತಿಗೆ ಮನವಿ ಮಾಡಿದ್ದರು ಯಾವ ಕ್ರಮ ಇನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವರದಿ...
ಐವರ್ನಾಡಿನಲ್ಲಿ ನಡೆದ ನಾ ನಾಯಕಿಯರ ಪೂರ್ವಭಾವಿ ಸಭೆಯು ಜಯಪ್ರಕಾಶ್ ನೆಕ್ರಪ್ಪಾಡಿಯವರ ಮನೆಯಲ್ಲಿ ನಡೆಯಿತು. ಈ ಸಭೆಗೆ ಮಾಜಿ ಕೆಪಿಸಿಸಿ ಸದಸ್ಯರಾದ ಡಾ. ರಘು ಪಾಲ್ಗೊಂಡಿದ್ದರು . ಕಾಂಗ್ರೆಸ್ಸಿನ ಹಿರಿಯರಾದ ನೆಕ್ರಪ್ಪಾಡಿ ಕೃಷ್ಣಪ್ಪಗೌಡ , ಮಾಜಿ ತಾಲೂಕ್ ಪಂಚಾಯತ್ ಸದಸ್ಯ ರಾಜೀವಿ ಉದ್ದಂಪ್ಪಾಡಿ , ಪಂಚಾಯತ್ ಮಾಜಿ ಸದಸ್ಯ ಚಂಚಲಾಕ್ಷಿ ಕತ್ಲಡ್ಕ ಹಾಗೂ ಮಹಿಳೆಯರು ಮತ್ತು ಕಾಂಗ್ರೆಸ್...
Loading posts...
All posts loaded
No more posts