- Tuesday
- November 26th, 2024
ಸುಬ್ರಹ್ಮಣ್ಯ ಮಲೆಯಾಳ ಐನೆಕಿದು ಹರಿಹರಪಲ್ಲತ್ತಡ್ಕ ರಸ್ತೆ ತೀರ ಹದಗೆಟ್ಟಿದ್ದು ಯಾವುದೇ ವಾಹನ ಸಂಚರಿಸಲು ಅಸಾಧ್ಯವಾಗಿದ್ದು ಸರಕಾರಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟಕ್ಕೆ ಸಜ್ಜಾಗಿದ್ದಾರೆ.ಜು.16 ರಂದು ಊರವರು ಐನೆಕಿದು ಶಾಲಾ ವಠಾರದಲ್ಲಿ ಗ್ರಾಮಸ್ಥರ ಸಭೆ ಆಯೋಜಿಸಿದ್ದು ಈಗಾಗಲೇ ರಸ್ತೆಗೆ ಹಣ ಬಿಡುಗಡೆ ಯಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿರುತ್ತದೆ. ಆದರೇ ಈ ಬಗ್ಗೆ ಪಿಡಬ್ಲ್ಯೂಡಿ...
ಜಟ್ಟಿಪಳ್ಳ ಶಾಲೆಯ ಛಾವಣಿ ಇತ್ತೀಚೆಗೆ ಸುರಿದ ವ್ಯಾಪಕ ಮಳೆಗೆ ಹಾನಿಗೊಂಡಿತ್ತು. ಶಾಲೆಯ ಛಾವಣಿ ದುರಸ್ತಿಗಾಗಿ ಜಿ.ಪಂ. ನಿಂದ ರೂ.2 ಲಕ್ಷ ಅನುದಾನ ಇರಿಸಲಾಗಿತ್ತು. ಬಳಿಕ ಪ್ರಾಕೃತಿಕ ವಿಕೋಪದಡಿ ರೂ.3 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಒಟ್ಟು 5 ಲಕ್ಷ ರೂ ವೆಚ್ಚದಲ್ಲಿ ಮೇಲ್ಟಾವಣಿ ದುರಸ್ತಿ ಕಾಮಗಾರಿ ನಡೆಯಲಿದ್ದು ಇಂದಿನಿಂದ ಕಾಮಗಾರಿ ಆರಂಭಗೊಂಡಿದೆ.
ಇಂದು ಚೆಂಬು ಪೆರಾಜೆ ಭಾಗದಲ್ಲಿ ಭೂಮಿಯೊಳಗಿಂದ ಶಬ್ದ ಕೇಳಿಬಂದಿದೆ. ಇಂದು ಬೆಳಿಗ್ಗೆ 10.09 ಕ್ಕೆ ಭಾರಿ ಸದ್ದು ಕೇಳಿ ಬಂದಿದ್ದು ಜನರು ಆತಂಕದಲ್ಲಿ ಬದುಕುವಂತೆ ಮಾಡಿದೆ ಎಂದು ಚೆಂಬು ಗ್ರಾಮದ ಶಿವಪ್ರಕಾಶ್ ಅಮರ ಸುದ್ದಿಗೆ ಮಾಹಿತಿ ನೀಡಿದ್ದಾರೆ.
ಸುಳ್ಯ ನಗರ ಸೇರಿದಂತೆ ನ.ಪಂ ವ್ಯಾಪ್ತಿಯ ಹಲವು ರಸ್ತೆಗಳು ಸಮರ್ಪಕ ಚರಂಡಿ ವ್ಯವಸ್ಥೆಗಳಿಲ್ಲದೇ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಹಾಗೂ ಜನಸಾಮಾನ್ಯರ ಪ್ರಾಣ ಬಲಿಗಾಗಿ ಕಾಯುವಂತಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರ ಗಮನ ಹರಿಸಿಬೇಕಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೇ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದಾಗಿಯೇ ರಸ್ತೆಗಳೆಲ್ಲಾ ಗುಂಡಿಬೀಳುವಂತಾಗಿದೆ. ನಗರ ಪಂಚಾಯತ್ ಅಲ್ಲಲ್ಲಿ ಗುಂಡಿ...
ಆಡಳಿತ ಪಕ್ಷದವರಿಂದ ಅಭಿವೃದ್ಧಿಯಲ್ಲಿ ಕುಂಠಿತ ಮತ್ತು ಭ್ರಷ್ಟಚಾರದಿಂದ ಹೊರಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಮ್ಮು ಮೇಲಿನ ಆರೋಪವನ್ನು ಮರೆಮಾಚಲು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ ಎಂದು ನಗರ ಪಂಚಾಯತ್ ವಿಪಕ್ಷ ನಾಯಕ ಎಂ.ವೆಂಕಪ್ಪ ಗೌಡ ಹೇಳಿದರು. ಅವರು ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರ ಮಾಡಿದ ಆರೋಪ ಖಂಡಿಸಿ ಮಾತನಾಡಿದರು. ನಗರ ಪಂಚಾಯಿತ್ ನ ಇತಿಹಾಸದಲ್ಲಿ...
ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಹಾನಿಗೊಂಡ ಕಾಲು ಸೇತುವೆ, ಪದಕದ ಮುಳುಗು ಸೇತುವೆ ಹಾಗೂ ಹರಿಹರದಲ್ಲಿ ಬರೆ ಕುಸಿತದಿಂದ ಹಾನಿಗೊಂಡ ತೇಜಕುಮಾರ್ ಕಜ್ಜೋಡಿಯವರ ಮನೆ ವೀಕ್ಷಣೆ ಮಾಡಿ ಮಾತನಾಡಿದರು. ಬಹಿಷ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುವುದಿಲ್ಲ. ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು. ಹಂತಹಂತವಾಗಿ ನಾವು ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ಈಗಾಗಲೇ ಇಲ್ಲಿಗೆ 3 ಸೇತುವೆ ನಿರ್ಮಾಣ ಮಾಡಲಾಗಿದೆ....
ಐನೆಕಿದು ಗ್ರಾಮದ ಕೋಟೆ ಎಂಬಲ್ಲಿ ಸರಕಾರಿ ಬಸ್ಸೊಂದು ಕೆಸರಲ್ಲಿ ಬಾಕಿಯಾದ ಘಟನೆ ಜು.14 ರಂದು ನಡೆದಿದೆ. ಸುಬ್ರಹ್ಮಣ್ಯದಿಂದ ಬಾಳುಗೋಡಿಗೆ ಹೋಗುವ ಬಸ್ಸಿನ ಚಕ್ರ ಕೆಸರಲ್ಲಿ ಹೂತು ಹೋಗಿರುವುದರಿಂದ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಯಿತು. ಈ ರಸ್ತೆ ದುರಸ್ತಿ ಕಾಣದೇ ಹಲವಾರು ವರ್ಷಗಳೇ ಕಳೆದಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಜು.14ರಂದು ವಿಜೃಂಭಣೆಯಿಂದ ಜರುಗಿತು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾಗಿರುವ ಶ್ರೀಯುತ ರಾಧಾಕೃಷ್ಣ ಬೊಳ್ಳೂರುರವರು ಪ್ರಾಸ್ತಾವಿಕ ನುಡಿಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಸಚಿವರಾದ ಶ್ರೀಯುತ ಎಸ್ ಅಂಗಾರ ಅವರು ವಹಿಸಿಕೊಂಡು ಮಾತನಾಡಿ, ಈ ಊರಿನಲ್ಲಿ ಆರಂಭವಾದ...
ಅಜ್ಜಾವರ ಗ್ರಾಮದ ಕೆದ್ಕಾರ್ ರಾಮಣ್ಣ ಗೌಡರ ಕೊಟ್ಟಿಗೆಗೆ ಕಳೆದ ರಾತ್ರಿ ಎರಡು ಗಂಟೆ ಸುಮಾರಿಗೆ ಬೆಂಕಿ ತಗುಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಬೆಂಕಿಗೆ ಆಹುತಿಯಾಗಿದೆ. ಕೊಟ್ಟಿಗೆಯಲ್ಲಿದ್ದ ಪ್ರಿಡ್ಜ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿದೆ ಎಂದು ತಿಳಿದುಬಂದಿದೆ. ಸುಲಿದು ಇಟ್ಟಿದ್ದ ಅಡಿಕೆ ಕೂಡ ಬೆಂಕಿಗೆ ಆಹುತಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಪೋಲೀಸರು, ಕಂದಾಯ ಹಾಗೂ...
*ಸುಳ್ಯದ ಚಂದನ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಚುಟುಕು ವಾಚನ ಸ್ಪರ್ಧೆಯು ಇತ್ತೀಚಿಗೆ ಅರ್ಥಪೂರ್ಣವಾಗಿ ಜರುಗಿತು . ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಹಾ ಮ ಸತೀಶ್ ಬೆಂಗಳೂರು ರವರು ವಹಿಸಿದ್ದರು .ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಸಾಹಿತಿಗಳಾದ ಸಾನು (ಸಂಧ್ಯಾ ) ಉಬರಡ್ಕ ಸುಳ್ಯ ರವರು ನೆರವೇರಿಸಿದರು .ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಕೆವಿಜಿ ಪಾಲಿಟೆಕ್ಣಿಕ್...
Loading posts...
All posts loaded
No more posts