- Saturday
- November 2nd, 2024
ಕಾರ್ಕಳದಲ್ಲಿ ಜು. 14 ರಿಂದ 17 ರ ವರೆಗೆ ನಡೆದ ವಲಯ ತರಬೇತುದಾರರ ಪರೀಕ್ಷಾ ಕಮ್ಮಟದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಕಾರ್ಯದರ್ಶಿ ಜೇಸಿ ಕೌಶಿಕ್ ಕುಳ ರವರು ಉತ್ತೀರ್ಣರಾಗಿ ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇವರು ಜೇಸಿಐ ಪಂಜ ಪಂಚಶ್ರೀ ಯ ಪೂರ್ವಾಧ್ಯಕ್ಷರು, ವಲಯ ತರಬೇತುದಾರರೂ ಆಗಿದ್ದ ದಿ. ಮಹಾಬಲ ಕುಳ ಹಾಗೂ ರುಕ್ಮಿಣಿ ಮಹಾಬಲ...
ಆರಂತೋಡು ಹಾಗೂ ಮರ್ಕಂಜ ಗ್ರಾಮದ ಗಡಿಭಾಗದಲ್ಲಿರುವ ಅರಮನೆಗಯ ಎಂಬಲ್ಲಿರುವ ತೂಗು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದು ಈ ಭಾಗಕ್ಕೆ ನಿರ್ಮಿಸಬೇಕೆಂಬ ಬೇಡಿಕೆಗೆ ಮೂವತ್ತು ವರ್ಷ ಕಳೆದಿದೆ. ಅರಂತೋಡು -ಪಿಂಡಿಮನೆ – ಮಿತ್ತಡ್ಕ -ಮರ್ಕಂಜ ರಸ್ತೆಯಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಶಾಶ್ವತ ತೂಗು ಸೇತುವೆ ತುರ್ತಾಗಿ ನಿರ್ಮಿಸಬೇಕೆಂದು ಒತ್ತಾಯಿಸಿ ಬೇಡಿಕೆ ಈಡೇರುವವರೆಗೆ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿ...
ಸಂಪಾಜೆ ಗ್ರಾಮದ ಗೂನಡ್ಕ ರಾಜರಾಮಪುರ ಅಂಗವಾಡಿ ಕೇಂದ್ರದ ವಿದ್ಯುತ್ ಸಂಪರ್ಕ ಅಳವಡಿಸಿದ ಜಾಗದಲ್ಲಿ ಮಳೆ ಬರುವಾಗ ನೀರು ಸೋರುತ್ತಿದ್ದು, ಮೀಟರ್ ಹಾಗೂ ಉಪಕರಣ ಒದ್ದೆಯಾಗಿದ್ದು ಅಪಾಯದ ಸ್ಥಿತಿಯಲ್ಲಿದೆ. ಅಂಗನವಾಡಿ ಮಕ್ಕಳು ಗೋಡೆ ಒದ್ದೆಯಾಗಿರುವುದನ್ನು ಮುಟ್ಟಿದರೇ ಶಾಕ್ ಹೊಡೆಯುವುದಂತೂ ಸತ್ಯ. ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು...
ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಮಡಿಕೇರಿ ಡಿಸಿ ಕಛೇರಿ ಬಳಿ ತಡೆಗೋಡೆ ಕುಸಿತದ ಭೀತಿಯಿಂದ ಪರ್ಯಾಯವಾಗಿ ತಾಳತ್ತನಮನೆ ರಸ್ತೆ ಬಳಸಲು ಸೂಚನೆ ನೀಡಲಾಗಿತ್ತು. ಇದೀಗ ಆ ರಸ್ತೆಯಲ್ಲಿ ಕೂಡ ಭೂಕುಸಿದ ಸಾಧ್ಯತೆ ಹಿನ್ನೆಲೆಯಲ್ಲಿ ಮಡಿಕೇರಿ ಪೊಲೀಸರು ತಾಳತ್ತಮನೆ ಸಮೀಪ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಎರಡನೇ ಮೊಣ್ಣಂಗೇರಿ ರಾಮಕೊಲ್ಲಿ ಬಳಿ ಜಲಸ್ಪೋಟ ಉಂಟಾಗಿದ್ದು ಮಣ್ಣು ಮಿಶ್ರಿತ...
ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಹಾಗೂ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕನ್ನೆಜಾಲು ಜಗನಾಥ ರೈ ಜ್ಯೋತಿ ಅವರು ಜು.18ರಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ಇದೀಗ ಕೊನೆಯುಸಿರೆಳೆದಿದ್ದಾರೆ . ಇಎನ್ ಟಿ ಸ್ಪೆಷಲಿಸ್ಟ್ ಡಾ.ರವಿಶಂಕರ್ ರಲ್ಲಿ ಚಿಕಿತ್ಸೆಗೆಂದು ಬಂದಿದ್ದ ಅವರು ಅಲ್ಲಿಂದ ಹಿಂತಿರುಗಿ ಹೋಗುತ್ತಿರುವಾಗ ಹೃದಯಾಘಾತಕ್ಕೊಳಗಾದರು. ಕೂಡಲೇ ಅವರನ್ನು ಅವರ ಪುತ್ರಿ ಮತ್ತು ಅಳಿಯ ಕೆವಿಜಿ...
ಸುಳ್ಯ ಕಲಾಸಕ್ತರು ನಿರ್ದೇಶಿಸಿ ಅಭಿನಯಿಸಿದ "ಮೌನ ಮಾತಾದಾಗ" ಎಂಬ ಕನ್ನಡ ಆಲ್ಬಮ್ ಸಾಂಗ್ ವಿಷ್ಣುನಾಗ ಶೇಟ್ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಜು.24ರಂದು ಬಿಡುಗಡೆಗೊಳ್ಳಲಿದೆ. ಇದರ ನಿರ್ದೇಶನವನ್ನು ಕೀರ್ತನ್ ಶೆಟ್ಟಿ ಸುಳ್ಯ ಮಾಡಿದ್ದು ಇದರ ಸಾಹಿತ್ಯವನ್ನು ಪ್ರಶಾಂತ್ ವಿಟ್ಲ ಹಾಗೂ ಗಾಯನವನ್ನು ವಿಷ್ಣುನಾಗ ಶೇಟ್ ಇವರು ಮಾಡಿದ್ದಾರೆ. ಯಶ್ ಫೋಟೋಗ್ರಫಿ ಕಲ್ಲುಗುಂಡಿ ಛಾಯಾಗ್ರಹಣದೊಂದಿಗೆ ಜೀವನ್ ಕೆರೆಮೂಲೆ ಇವರು...
ನೂರು ಕಷ್ಟ ದಾಟಿ ಸಾಗಿ ಗೆಲುವು ಪಡೆದುಕೊಂಡೆ ನೀ, ಗೆಲುವು ಪಡೆದ ಸಂತಸದಲಿ ಕಳೆದ ದಿನವ ಮರೆತೆ ನೀ, ಬಂದ ಹಾದಿ ತೊರೆದೆ ನೀ…ನಿನ್ನ ಗೆಲುವ ಮೆಟ್ಟಿಲಾದ ನಿನ್ನವರ ಮರೆತೆ ನೀ, ನಾನೇ ಎಂಬ ಜಂಭದಲ್ಲಿ ಪ್ರೀತಿ ಸ್ನೇಹ ಮರೆತೆ ನೀ, ಕಳೆದ ಎಲ್ಲಾ ದಿನಗಳನ್ನು ಮರೆತು ಮುಂದೆ ನಡೆದೆ ನೀ…ಸೋಲೇ ಗೆಲುವ ಮೆಟ್ಟಿಲೆಂಬ ಮಾತನ್ನು...
ಜಾಲ್ಸೂರು ಗ್ರಾಮದ ಬೊಳುಬೈಲು ಬಳಿ ಚಲಿಸುತ್ತಿದ್ದ ಸ್ವಿಫ್ಟ್ ಕಾರಿನ ಮೇಲೆ ಮರದ ಗೆಲ್ಲು ಮುರಿದು ಬಿದ್ದು ಕಾರು ಹಾನಿಗೊಂಡ ಘಟನೆ ವರದಿಯಾಗಿದೆ. ಜಯನಗರ ನಿವಾಸಿ ಮುಜೀಬ್ ಎಂಬುವವರು ಬೊಳುಬೈಲಿನಲ್ಲಿರುವ ಪೀಸ್ ಸ್ಕೂಲಿನಿಂದ ತಮ್ಮ ಮಗುವನ್ನು ಕರೆ ತರುವ ವೇಳೆ ಕುಂಬರ್ಚೋಡು ಬಳಿ ಬರುತ್ತಿದ್ದಂತೆ ಮೇಲಿನಿಂದ ಕಾರಿನ ಮುಂಭಾಗದ ಗಾಜಿನ ಭಾಗಕ್ಕೆ ಮರದ ಗೆಲ್ಲು ಬಿದ್ದಿದೆ.ಘಟನೆಯಿಂದ ಕಾರಿನ...
ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರದಾನ ಮಂತ್ರಿಗಳ ಕಾರ್ಯಾಲಯದ ವೆಬ್ಸೈಟ್ ವಿಳಾಸಕ್ಕೆ ಇಮೇಲ್ ಕಳಿಸುವ ಅಭಿಯಾನ ಇಂದಿನಿಂದ ಆರಂಭಿಸಲಾಗುವುದು ನಡೆಸಲಾಗುವುದು ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳುತಿಳಿಸಿದ್ದಾರೆ. ವಾರ್ಡ್ ನ ಸಮಸ್ತ ಜನತೆ ಪ್ರಧಾನ ಮಂತ್ರಿಗಳಿಗೆ ನೇರ ಇ ಮೇಲ್ ಮಾಡುವ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ನಮ್ಮ ಊರಿನಿಂದ ಗರಿಷ್ಠ ಇ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜನಸಂಖ್ಯೆ ಮಿತಿ ಮೀರಿ ಏರುತ್ತಿರುವ ಇಂದಿನ ದಿನದಲ್ಲಿ ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ರೆಡ್ ಕ್ರಾಸ್ ಘಟಕ...
Loading posts...
All posts loaded
No more posts