Ad Widget

ಕೌಶಿಕ್ ಕುಳ ಜೇ.ಸಿ.ವಲಯ ತರಬೇತುದಾರರಾಗಿ ಆಯ್ಕೆ

ಕಾರ್ಕಳದಲ್ಲಿ ಜು.14 ರಿಂದ 17 ರವರೆಗೆ ನಡೆದ ವಲಯ ತರಬೇತುದಾರರ ಪರೀಕ್ಷಾ ಕಮ್ಮಟದಲ್ಲಿ ಜೇಸಿಐ ಪಂಜ ಪಂಚಶ್ರೀ ಯ ಕಾರ್ಯದರ್ಶಿ ಜೇಸಿ ಕೌಶಿಕ್ ಕುಳ ರವರು ಉತ್ತೀರ್ಣರಾಗಿ ವಲಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ. ಇವರು ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರು, ವಲಯ ತರಬೇತುದಾರರೂ ಆಗಿದ್ದ ದಿ. ಮಹಾಬಲ ಕುಳ ಹಾಗೂ ಶ್ರೀಮತಿ ರುಕ್ಮಿಣಿ ಮಹಾಬಲ ಅವರ ಪುತ್ರ....

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ – ಮಾಧ್ಯಮ ಜನರ ಧ್ವನಿಯಾಗಿರಬೇಕು – ಎಂ.ನಾ.ಚಂಬಲ್ತಿಮಾರ್ – ಚಂದ್ರಾವತಿ ಬಡ್ಡಡ್ಕರಿಗೆ ಸನ್ಮಾನ

ಮಾಧ್ಯಮ ಜನರ ಧ್ವನಿಯಾಗಿರಬೇಕು ಆಗ ಮಾತ್ರ ಪತ್ರಕರ್ತರು ಸಮಾಜದ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಕಾಸರಗೋಡಿನ ‘ಕಣಿಪುರ’ ಯಕ್ಷಗಾನ ಮಾಸ ಪತ್ರಿಕೆಯ ಸಂಪಾದಕ ಎಂ. ನಾ. ಚಂಬಲ್ತಿಮಾರ್ ಹೇಳಿದರು. ಅವರು ಸುಳ್ಯದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾ.ಪಂ.ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪತ್ರಕರ್ತರು ಸಮಾಜವನ್ನು...
Ad Widget

ಜೇಸಿಐ ಪಂಜ ಪಂಚಶ್ರೀ ವತಿಯಿಂದ ಪ್ರೋಟೀನ್ ಪೌಡರ್ ವಿತರಣೆ

ಜೇಸಿಐ ಪಂಜ ಪಂಚಶ್ರೀ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಅಂಗನವಾಡಿ ಕೇಂದ್ರ ಪಂಜ ಇದರ ಆಶ್ರಯದಲ್ಲಿ ಕಡಿಮೆ ತೂಕದ ಪಂಜ ಅಂಗನವಾಡಿ ಮಕ್ಕಳಿಗೆ ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಪಂಜ ಪಂಚಶ್ರೀಯ ಘಟಕ ಅಧ್ಯಕ್ಷರಾದ ಜೆಫ್ ಮ್. ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು....

ಕುಕ್ಕುಜಡ್ಕ :- ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ, ವ್ಯವಸ್ಥಾಪನಾ ಸಮಿತಿ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯು ಜು.18 ರಂದು ಕುಕ್ಕುಜಡ್ಕ ಅಮರ ಸಹಕಾರಿ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಾಲಕೃಷ್ಣ ಬೊಳ್ಳೂರು, ಗೌರವಾಧ್ಯಕ್ಷರಾಗಿ ಸತ್ಯನಾರಾಯಣ ಮೂರ್ತಿ ಅವರುಗಳನ್ನು ಆಯ್ಕೆ ಮಾಡಲಾಯಿತು. ಆ. 06 ರಿಂದ ಆ....

ಬಾಳುಗೋಡು :- ವನಮಹೋತ್ಸವ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಕರ್ನಾಟಕ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ವಲಯ, ಸುಳ್ಯ ತಾಲೂಕು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸ.ಹಿ.ಪ್ರಾ ಶಾಲೆ ಬಾಳುಗೋಡು ಇವರ ಜಂಟಿ ಆಶ್ರಯದಲ್ಲಿ ಜು.19 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳುಗೋಡು ಇಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು....

ಸುಳ್ಯ : ಅರೆಭಾಷೆ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಸಾಮಾನ್ಯ ಸಭೆ

ಕರ್ನಾಟಕ ರಾಜ್ಯ ಅರೆಭಾಷೆ ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಸಾಮಾನ್ಯ ಸಭೆ ಜು. 18 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಜಯಪ್ರಕಾಶ್ ಮೊಂಟಡ್ಕ ವಹಿಸಿದ್ದರು. ಓಟದ ನೋಂದಣಿ ಕಾರ್ಯದ ಪ್ರಗತಿ ಮತ್ತು ಸದಸ್ಯರ ಸೇರ್ಪಡೆ ಮತ್ತು ಒಕ್ಕೂಟದ ಅಭಿವೃದ್ಧಿಯ ಇತರ ವಿಷಯಗಳ ಬಗ್ಗೆ ಚರ್ಚಿಸಿ, ಜೂನಿಯರ್ ಮತ್ತು ಸೀನಿಯರ್...

ಮರ್ಕಂಜ : ಕೃಷಿ ಸಂಬಂಧಿತ ಸಾಲ ಮರುಪಾವತಿಗೆ ವಿನಾಯಿತಿ ನೀಡಲು ಪಂಚಾಯತ್ ನಿರ್ಣಯ – ಜಿಲ್ಲಾಧಿಕಾರಿಗಳಿಗೆ ಮನವಿ

ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೃಷಿ ಸಂಬಂಧಿಸಿದ ಸಾಲಗಳ ಕಂತು ಮರುಪಾವತಿಗೆ ಈ ಆರ್ಥಿಕ ವರ್ಷ ವಿನಾಯಿತಿ ನೀಡಬೇಕೆಂದು ನಿರ್ಣಯಿಸಲಾಗಿದೆ. ಈ ಬಗ್ಗೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದೆಂದೂ ತೀರ್ಮಾನಿಸಲಾಯಿತು. ‌ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಪವಿತ್ರ ಬಿ. ವಹಿಸಿದ್ದರು.ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ. ಸದಸ್ಯ ಚಿತ್ತರಂಜನ್ ಕೋಡಿ ವಿಷಯ ಪ್ರಸ್ತಾಪಿಸಿದರು. ನಿರಂತರವಾಗಿ...

ಜು.20: ಪತ್ರಿಕಾ ದಿನಾಚರಣೆಯಂದು ಚಂದ್ರಾವತಿ ಬಡ್ಡಡ್ಕ ಅವರಿಗೆ ಸನ್ಮಾನ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ ಹಾಗು ಸನ್ಮಾನ ಕಾರ್ಯಕ್ರಮ ಜುಲೈ 20 ರಂದು ಪೂ.10 ರಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ರಾಜ್ಯ ‘ಸಹಕಾರಿ ರತ್ನ’ ಪುರಸ್ಕೃತರಾದ ಸೀತಾರಾಮ ರೈ ಸವಣೂರು ಕಾರ್ಯಕ್ರಮ ಉದ್ಘಾಟಿಸುವರು. ಕಾಸರಗೋಡಿನ ‘ಕಣಿಪುರ’ ಯಕ್ಷಗಾನ ಮಾಸ ಪತ್ರಿಕೆಯ...

ಕೊಲ್ಲಮೊಗ್ರ: ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿರುವ ಕೃಷಿ – ಹೊಳೆಗೆ ತಡೆಗೋಡೆ ನಿರ್ಮಿಸಲು ನಿವಾಸಿಗಳ ಒತ್ತಾಯ

ಹಲವು ವರ್ಷಗಳಿಂದ ತಾವು ಬೆಳೆಸಿದ ಕೃಷಿ ತುಂಬಿ ಹರಿಯುತ್ತಿರುವ ನದಿ ಪಾಲಾಗುತ್ತಿದ್ದು ಅಡಿಕೆ ಮರ,ತೆಂಗಿನ ಮರ ,ಹಲಸಿನ ಮರ ಕೊಚ್ಚಿ ಹೋಗುತ್ತಿದೆ. ಸಂಪೂರ್ಣ ಕೃಷಿ ಭೂಮಿ ನದಿ ಪಾಲು ಆಗುತ್ತಿದೆ . ಇದು ಕೊಲ್ಲಮೊಗ್ರ ಚಾಳೆಪ್ಪಾಡಿ ದೋಲನ ಮನೆ ಎಂಬಲ್ಲಿನ ಅನೇಕ ಕೃಷಿಕರ ನೋವಿಗೆ ಕಾರಣವಾಗಿದೆ.2018 ನೇ ಇಸವಿಯಲ್ಲಿ ನಡೆದ ಪ್ರಕೃತಿ ವಿಕೋಪದಲ್ಲಿ ಕಲ್ಮಕಾರು ಬೆಟ್ಟದಲ್ಲಿ...

ದೊಡ್ಡತೋಟ :- ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ನೂತನ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕಿನ ದೊಡ್ಡತೋಟ ವಲಯದ ಮಿತ್ತಡ್ಕ, ಗಟ್ಟಿಗಾರು, ನೆಲ್ಲೂರು ಕೆಮ್ರಾಜೆ, ದೊಡ್ಡತೋಟ, ದುಗ್ಗಲಡ್ಕ, ಸೋಣಂಗೇರಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ದೇವರ ಪೂಜೆಯು ಜು.18 ರಂದು ರೆಂಜಾಳ ಶ್ರೀ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹರೀಶ್...
Loading posts...

All posts loaded

No more posts

error: Content is protected !!