Ad Widget

ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವವರೆಗೆ ಪಕ್ಷ ಚಟುವಟಿಕೆಗಳಿಂದ ದೂರ ಇರಲು ನಿರ್ಧರಿಸಿದ ಅಡ್ತಲೆ ಬೂತ್ ಸಮಿತಿ

ರಾಜ್ಯದಲ್ಲಿ ನಮ್ಮದೇ ಪಕ್ಷದ ಸರಕಾರವಿದ್ದರೂ ನಿರಂತರವಾಗಿ ಹಿಂದೂ ಸಂಘಟನೆಗಳ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ನಮ್ಮ ತಾಲೂಕಿನ ಹಿಂದೂ ಸಂಘಟನೆ ಕಾರ್ಯಕರ್ತ ಮತ್ತು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪ್ರವೀಣ್ ನೆಟ್ಟಾರ್ ರವರ ಹತ್ಯೆ ಇದಕ್ಕೆ ಇನ್ನೊಂದು ಸೇರ್ಪಡೆ, ಇದುವರೆಗಿನ ಕೃತ್ಯ ನಡೆಸಿದ ಯಾವುದೇ ಹಂತಕರಿಗೂ ಕಠಿಣವಾದ ಶಿಕ್ಷೆ ಆಗಲೇ ಇಲ್ಲ. ಇದು ಬರೀ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಅದರ ನಮ್ಮ ಸಹೋದರ ಪ್ರವೀಣ್ ನೆಟ್ಟಾರ್ ಹಂತಕರಿಗೂ ಇದೇ ರೀತಿಯ ರಾಜಮರ್ಯಾದೆಯ ಶಿಕ್ಷೆ ಆಗಲೇಬಾರದು. ಪ್ರವೀಣ್ ನೆಟ್ಟಾರ್ ಅವರ ಹಂತಕರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ಆಗುವ ತನಕ ನಮ್ಮ ಬೂತ್ ಗೆ ಸಂಬಂಧಿಸಿದ ಎಲ್ಲ ಕಾರ್ಯಕರ್ತರು ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳಿಂದ ದೂರ ಇರುವುದಾಗಿ ಜು.28ರಂದು ನಡೆದ ಬೂತ್ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿರುತ್ತೇವೆ ಎಂದು ಬೂತ್ ಸಮಿತಿ ಅಧ್ಯಕ್ಷ ಲೋಹಿತ್ ಎಂ.ಎ. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading